".

Header Ads

ಮುಂಬೈ:- ಲಿಫ್ಟ್​ ಕೊಡ್ತೀನಿ ಎಂದು ಕಾರು ಹತ್ತಿಸಿಕೊಂಡು ಕೊಂದೇ ಬಿಟ್ಟ, ದೇಹ ಒಳಗಿಟ್ಟು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ್ರೂ ಸಿಕ್ಕಿಬಿದ್ದ

 


 ಲಾತೂರಿನಲ್ಲಿ ಕಾರೊಂದು ಸುಟ್ಟುಕರಕಲಾದ ರೀತಿಯಲ್ಲಿ ಪತ್ತೆಯಾಗಿತ್ತು, ಅದರಲ್ಲಿ ಗೋಣಿಚೀಲದಲ್ಲಿದ್ದ ಶವ ಕೂಡ ಬೆಂದು ಹೋಗಿತ್ತು. ಈ ಕಾರು ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್​ನದ್ದು ಆದ ಕಾರಣ ಆತನೇ ಸಾವನ್ನಪ್ಪಿದ್ದಾನೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ನಡೆದಿರುವ ಘಟನೆಯೇ ಬೇರೆ, ಈ ಗಣೇಶ್ ಚೌಹಾಣ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವನಿಗೆ ಲಿಫ್ಟ್​ ಕೊಡುತ್ತೀನಿ ಎಂದು ಹತ್ತಿಸಿಕೊಂಡು ಕೊಂದೇ ಬಿಟ್ಟಿದ್ದ. ಬಳಿಕ ಆತನನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ  ಆದರೆ ಗಣೇಶ್​ಗೆ ಮತ್ತೊಬ್ಬನನ್ನು ಕೊಲ್ಲುವ ಉದ್ದೇಶವಿರಲಿಲ್ಲ, ಒಟ್ಟಿನಲ್ಲಿ ತಾನು ಸತ್ತಿದ್ದೇನೆಂದು ಎಲ್ಲರೂ ತಿಳಿದುಕೊಳ್ಳಬೇಕೆಂಬ ಉದ್ದೇಶವಿದ್ದಿದ್ದು ಸ್ಪಷ್ಟವಾಗಿದೆ. ಕಾರಿನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿದಾಗ ಅವರು ಅದನ್ನು ತಮ್ಮ ಸಂಬಂಧಿಕರೊಬ್ಬರಿಗೆ ನೀಡಿರುವುದು ಕಂಡುಬಂದಿತ್ತು. ಆ ವ್ಯಕ್ತಿ ಸಂಬಂಧಿ ಗಣೇಶ್​ ಚೌಹಾಣ್​ ಸಂಪರ್ಕಿಸಲು ಮುಂದಾದಾಗ ಆತ ಮನೆಗೆ ಬಂದಿಲ್ಲ, ಮೊಬೈಲ್ ಕೂಡ ಸ್ವಿಚ್ಡ್​ ಆಫ್ ಆಗಿದೆ ಎಂದು ಪೊಲೀಸರಿಗೆ ತಿಳಿಸಲಾಯಿತು.

ಈ ಎಲ್ಲಾ ಸಂಗತಿಗಳ ಆಧಾರದ ಮೇಲೆ ಮೃತಪಟ್ಟ ವ್ಯಕ್ತಿ ಗಣೇಶ್ ಎಂಬುದು ಆರಂಭಿಕ ಊಹೆಯಾಗಿತ್ತು. ಆದರೆ ಪೊಲೀಸರ ತನಿಖೆ ಮುಂದುವರೆದಂತೆ ಪೊಲೀಸರಿಗೆ ಹಲವು ಅಂಶಗಳು ಮನವರಿಕೆಯಾಗುತ್ತಾ ಹೋಗಿತ್ತು. ಆತನಿಗೆ ಓರ್ವ ಯುವತಿ ಜತೆ ಪ್ರೀತಿ ಇದೆ ಎಂಬುದು ತಿಳಿದುಬಂದಿತ್ತು.

ಆಕೆಯನ್ನು ಸಂಪರ್ಕಿಸಿದಾಗ ಈ ಘಟನೆಯ ಬಳಿಕ ಗಣೇಶ್ ಬೇರೊಂದು ನಂಬರ್​ ಬಳಸಿ ಆಕೆಗೆ ಸಂದೇಶ ಕಳುಹಿಸಿರುವುದು ತಿಳಿದುಬಂದಿತ್ತು. ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿ ಜೀವಂತವಾಗಿದ್ದಾನೆ ಎಂಬುದನ್ನು ಅರಿತ ಪೊಲೀಸರು ಹುಡುಕಾಟ ಆರಂಭಿಸಿದ್ದರು.

ಆ ಫೋನ್ ನಂಬರ್ ಪೊಲೀಸರನ್ನು ಕೊಲ್ಹಾಪುರಕ್ಕೆ ಕೊಂಡೊಯ್ದಿತ್ತು, ಅಲ್ಲಿ ಚೌಹಾಣ್ ಸಿಕ್ಕಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಆತ 1 ಕೋಟಿ ರೂಗಳಜೀವ ವಿಮಾ ಪಾಲಿಸಿಯನ್ನು ಮಾಡಿಸಿದ್ದ, ಗೃಹ ಸಾಲದ ಹಣವನ್ನು ತೀರಿಸಲು ಈ ನಾಟಕವಾಡಿದ್ದ, ಅದಕ್ಕೆ ಒಂದು ಅಮಾಯಕನ ಜೀವವನ್ನು ಬಲಿ ಪಡೆದಿದ್ದ ಎಂಬುದು ತಿಳಿದುಬಂದಿದೆ.

ಶನಿವಾರ ಔಸಾದ ತುಳಜಾಪುರ ಟಿ ಜಂಕ್ಷನ್​ನಲ್ಲಿ ಗೋವಿಂದ್ ಯಾದವ್ ಎಂಬ ವ್ಯಕ್ತಿಗೆ ಗಣೇಶ್ ಲಿಫ್ಟ್​ ಕೊಟ್ಟಿದ್ದ. ಯಾದವ್ ಕುಡಿದ ಮತ್ತಿನಲ್ಲಿದ್ದ, ಚೌಹಾಣ್ ಇದರ ಲಾಭವನ್ನು ಪಡೆದಿದ್ದ.ಆತ ಕಾರನ್ನು ನಿಲ್ಲಿಸಿ ಯಾದವ್​ಗೆ ಊಟ ತಂದುಕೊಟ್ಟಿದ್ದ, ಊಟದ ಬಳಿಕ ಯಾದವ್ ನಿದ್ರೆಗೆ ಜಾರಿದ್ದ, ಬಳಿಕ ಕೊಲೆ ಮಾಡಿದ್ದ.

Powered by Blogger.