".

Header Ads

ಕರಾವಳಿ ಉತ್ಸವ : ಹೀಗಿದೆ ಪಾರ್ಕಿಂಗ್ ವ್ಯವಸ್ಥೆ


 ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಉದ್ಘಾಟನೆಯು ನಾಳೆ(ಡಿ.20) ಸಂಜೆ 5 ಗಂಟೆಗೆ ಮಂಗಳೂರು ನಗರದ ಕರಾವಳಿ ಮೈದಾನದಲ್ಲಿ ನೆರವೇರಲಿದೆ. 2026ರ ಜನವರಿ 2 ರ ವರೆಗೆ ಸಂಜೆ ವೇಳೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ  ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದು, ಈ ಸಮಯ ನಗರದ ಕೆಲವೊಂದು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ.  ಹೀಗಾಗಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಹೀಗಿದೆ ನಿಯಮ :-

  • ಲಾಲ್ ಬಾಗ್ ನಿಂದ – ಕರಾವಳಿ ಮೈದಾನದ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
  • ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸತಕ್ಕದ್ದು.
  • ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಫ್ಲೆಕ್ಸ್‌ಗಳನ್ನು  ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು.

ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಗಳು :-

  • ಉರ್ವ ಮಾರ್ಕೆಟ್ ಮೈದಾನ  – ಕಾರು
  • ಗಾಂಧಿನಗರ ಸರಕಾರಿ ಶಾಲೆ – ಪ್ರೆಸ್ ಕ್ಲಬ್ ಬಳಿ- ದ್ವಿಚಕ್ರ/ಕಾರು
  • ಲೇಡಿಹಿಲ್ ಚರ್ಚ್ ಪಾರ್ಕಿಂಗ್ – ದ್ವಿಚಕ್ರ/ಕಾರು
  • ಕೆನರಾ ಸ್ಕೂಲ್ ಮೈದಾನ, ಮಣ್ಣಗುಡ್ಡೆ – ದ್ವಿಚಕ್ರ/ಕಾರು
  • ತಿಮ್ಮಪ್ಪ ಹೋಟೆಲ್ ಅವರಣ – ದ್ವಿಚಕ್ರ/ಕಾರು
  • ಸ್ಕೌಟ್ & ಗೈಡ್ ಹಾಲ್ ಅವರಣ (ಕರಾವಳಿ ಮೈದಾನ ಹಿಂಭಾಗ) – ದ್ವಿಚಕ್ರ ವಾಹನ
  • ಉರ್ವ ಮಾರ್ಕೆಟ್ ರಸ್ತೆ- ದ್ವಿಚಕ್ರ ವಾಹನ
  • ಹ್ಯಾಟ್ ಹಿಲ್ ರಸ್ತೆ – ದ್ವಿಚಕ್ರ ವಾಹನ
Powered by Blogger.