".

Header Ads

ಮದುವೆಯಾದ ಮರುದಿನವೇ ಹೃದಯಾಘಾತಕ್ಕೆ ನವವಿವಾಹಿತ ಸಾವು

 


ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನವವಿವಾಹಿತ ರಮೇಶ್ (30) ಸೋಮವಾರ ಹೃದಯಾಘಾತದಿಂದ ನಿಧನರಾದರು.ಹರಪ್ಪನಹಳ್ಳಿ ಸಮೀಪದ ಬಂಡ್ರಿಯ ಮಧುವನ್ನು ವರಿಸಿದ್ದ ರಮೇಶ್ ಸೋಮವಾರ (ಡಿ.1) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮದುವೆಯಾದ ನಂತರ ರಮೇಶ್‌ ವಧುವಿನ‌ ಮನೆಗೆ ತೆರಳಿದ್ದರು. ದೇವಸ್ಥಾನದಿಂದ ಮೆರವಣಿಗೆ ಮೂಲಕ ವಧುವಿನ ಮನೆಗೆ ಕರೆದುಕೊಂಡು ಹೋಗಿದ್ದರು. ವಧುವಿನ ಮನೆ ತಲುಪಿದ ರಮೇಶ್ ದಂಪತಿ ದೇವರಿಗೆ ಕೈ ಮುಗಿಯಲು ತೆರಳಿದ ವೇಳೆ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆಯೊಯ್ಯುವ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.

ಮಂಗಳವಾರ ಹೊಸಕೊಪ್ಪದಲ್ಲಿ ರಮೇಶ್‌ ಅಂತ್ಯಕ್ರಿಯೆ ನಡೆಯಿತು.1 ವರ್ಷದ ಹಿಂದೆ ನಿಶ್ಚಯವಾಗಿದ್ದ ವಧುವಿನೊಂದಿಗೆ ಭಾನುವಾರ ಶಿವಮೊಗ್ಗದ ಬಿ.ಹೆಚ್ ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ರಮೇಶ್‌ ಅವರ ಮದುವೆ ನಡೆದಿತ್ತು.

Powered by Blogger.