ಆತ್ಮಹತ್ಯೆಗಾಗಿ ನೇಣಿಗೆ ಶರಣಾಗಲು ಹೋಗಿ ತುಂಡಾದ ಹಗ್ಗ, ಕೆಳಕ್ಕೆ ಬಿದ್ದು ತಲೆ ಗಾಯವಾಗಿ ಆಸ್ಪತ್ರೆಯಲ್ಲಿ ಮೃತ್ಯು.
ಆತ್ಮಹತ್ಯೆ ಮಾಡಲು ನೇಣಿಗೆ ಶರಣಾಗಲು ಹೋಗಿದ್ದ ಸಂದರ್ಭ ಹಗ್ಗ ತುಂಡಾಗಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಐವರ್ನಾಡು ಗ್ರಾಮದ ಮಾಧವ (60) ಮೃತ ವ್ಯಕ್ತಿಯಾಗಿದ್ದಾರೆ. ಹಲವು ವರ್ಷಗಳಿಂದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ಮಾಧವ ಅವರು ಆತ್ಮಹತ್ಯೆಗೆ ಪ್ರಯತ್ನಿಸಿ ನೇಣು ಬಿಗಿದು ಜಿಗಿದ ವೇಳೆ ಹಗ್ಗ ತುಂಡಾಗಿ ಕೆಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಅವರನ್ನು ಸುಳ್ಯ ಖಾಸಾಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಾಧವ ಅವರು ಕೊನೆಯುಸಿರ ಎಳೆದಿದ್ದಾರೆ .ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
Post a Comment