".

Header Ads

ಎಣ್ಣೆ ಮತ್ತಲ್ಲಿ ಸ್ನೇಹಿತನನ್ನೇ ಕೊಲೆಗೈದು ವಿಡಿಯೋ ಮಾಡಿದ್ದ ಆರೋಪಿ ಅರೆಸ್ಟ್

 


ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಹತ್ಯೆ ಮಾಡಿ, ಶವದ ಮುಂದೆ ನಿಂತು ಸೆಲ್ಫಿ ವೀಡಿಯೋ ಮಾಡಿದ ಕಿರಾತಕನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಉಲ್ಲಾಸ್ (21). ಇವನೇ ಪ್ರಕರಣದ ಮುಖ್ಯ ಆರೋಪಿ.

ಡಿಸೆಂಬರ್ 8ರಂದು ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಉಲ್ಲಾಸ್ ತನ್ನ ಸ್ನೇಹಿತ ಕೀರ್ತಿಯನ್ನು ಕೊಲೆಗೈದಿದ್ದ.

ಇಬ್ಬರೂ ಆಟೋ ಚಾಲಕರು, ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು.

ಮದ್ಯಪಾನ ವೇಳೆ ಜಗಳವಾಗಿ, ಕೀರ್ತಿ ಉಲ್ಲಾಸ್ ಕೆನ್ನೆಗೆ ಬಾರಿಸಿದ್ದ. ಇದರಿಂದ ಕೋಪಗೊಂಡ ಉಲ್ಲಾಸ್, ಮತ್ತೆ ಕುಡಿಯಲು ಇನ್ನಿಬ್ಬರೊಂದಿಗೆ ಕೀರ್ತಿಯನ್ನು ಆಟೋದಲ್ಲಿ ಕರೆದೊಯ್ದಿದ್ದ. ನಂತರ ಜಗಳ ಹೆಚ್ಚಾಗಿ, ಕಲ್ಲಿನಿಂದ ಕೀರ್ತಿಗೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದ.

ಮತ್ತಿನ ನಶೆಯಲ್ಲಿ ಶವದ ಬಳಿ ನಿಂತು ಸೆಲ್ಫಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾನೆ.

ಪ್ರಸ್ತುತ ಉಲ್ಲಾಸ್ ಅರೆಸ್ಟ್ ಆಗಿದ್ದು, ಘಟನೆಯಲ್ಲಿ ಪಾತ್ರ ಹೊಂದಿದ್ದ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Powered by Blogger.