ದಿವಾಳಿಯತ್ತ ಇರಾನ್ – ಬೀದಿಗಿಳಿದ ಜನ
ಇರಾನ್ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿದ್ದು, ಇರಾನ್ ಕರೆನ್ಸಿ ರಿಯಾಲ್ ಪಾತಳಕ್ಕೆ ಕುಸಿತ ಕಂಡಿದ್ದು,ದೇಶದ ಆರ್ಥಿಕ ಸ್ಥಿತಿ ಹದಗಟ್ಟೆ ಬೆನ್ನಲ್ಲೇ ಇರಾನ್ ಜನ ಇದೀಗ ಬೀದಿ ಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ.ಅಮೇರಿಕಾದ ಹೇರಿದ ನಿರ್ಬಂಧಗಳಿಂದಾಗಿ ಇರಾನ್ ಸಂಪೂರ್ಣ ದಿವಾಳಿಯತ್ತ ಸಾಗಿದೆ. ಇರಾನ್‌ನ ಕರೆನ್ಸಿ, ರಿಯಾಲ್, ಅಮೆರಿಕನ್ ಡಾಲರ್ ಎದುರು ದಾಖಲೆಯ ಮಟ್ಟಕ್ಕೆ ಕುಸಿತ ಕಂಡು ಆರ್ಥಿಕವಾಗಿ ಬಿಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿದೆ. ಜನ ಇದೀಗ ಬೀದಿಗಿಳಿದಿದ್ದಾರೆ, ಡಿಸೆಂಬರ್ 28ರಂದು ಸಣ್ಣದಾಗಿ ಆರಂಭವಾಗಿದ್ದ ಜನರ ಪ್ರತಿಭಟನೆ ಹಾಗೂ ಮುಷ್ಕರಗಳು ಜ್ವಾಲಾಗ್ನಿಯಂತೆ ಪರಿಣಮಿಸಿದ್ದು, 3 ದಿನಕ್ಕೆ ಕಾಲಿಟ್ಟಿದೆ. ಇರಾನ್ ರಾಜಧಾನಿ ತೆಹ್ರಾನ್‌ನ ಗ್ರ್ಯಾಂಡ್ ಬಜಾರ್‌ನಲ್ಲಿ ಅಂಗಡಿ ಮಾಲೀಕರು ಮುಷ್ಕರ ಆರಂಭಿಸಿದ್ದರು.ಈ ಮುಷ್ಕರದ ಸಣ್ಣ ಬೆಂಕಿ ಕಿಡಿ ಹೊತ್ತಿಕೊಂಡು ನಂತರ ಕರಾಜ್, ಹಮೆದಾನ್, ಕೇಶ್ಮ್, ಮಲಾರ್ಡ್, ಇಸ್ಫಹಾನ್, ಕರ್ಮನ್‌ಶಾ, ಶಿರಜ್ ಮತ್ತು ಯಜ್ದ್‌ನಂತಹ ನಗರಗಳು ಸೇರಿಂದತೆ ಇಡಿ ದೇಶವೇ ಸಂಪೂರ್ಣವಾಗಿ ಪ್ರತಿಭಟನೆಯಲ್ಲಿ ಮುಳುಗಿದೆ. ಈ ಕುರಿತ ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು,ಇದರಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸುತ್ತಿರುವುದು ಕಂಡುಬಂದಿದೆ.
Post a Comment