".

Header Ads

ಉಡುಪಿ :- ಸ್ನೇಹಿತನ ಹೆಸರಿನಲ್ಲಿ ಕರೆ ಮಾಡಿ ನಕಲಿ ಗೂಗಲ್ ಪೇ ಮೆಸೆಜ್ ಕಳುಹಿಸಿ ವ್ಯಕ್ತಿಯೊಬ್ಬರಿಂದ 1 ಲಕ್ಷ ಹಣ ವಂಚನೆ

 ಮೊಬೈಲ್ ಗೆ ನಕಲಿ ಗೂಗಲ್ ಪೇ ಮೆಸೆಜ್ ಕಳುಹಿಸಿ 1 ಲಕ್ಷ ಹಣವನ್ನು ವಂಚನೆ ಮಾಡಿರುವ ಕುರಿತಂತೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶೋಕ್ ಎನ್ನುವವರಿಗೆ ಸಂದೀಪ್ ಎಂದು ಹೇಳಿಕೊಂಡು ಅನಾಮಿಕ ಜನವರಿ 15 ರಂದು ಕರೆ ಮಾಡಿದ್ದಾರೆ. ಈ ವೇಳೆ ಅಶೋಕ್ ಅವರ ಹಳೆಯ ಸ್ನೇಹಿತ ಎಂದು ನಂಬಿ ಮಾತನಾಡಿದ್ದಾರೆ. ಕರೆ ಮಾಡಿದ ವ್ಯಕ್ತಿ ನನ್ನ ಅಣ್ಣನನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲುಮಾಡಿರುತ್ತೇನೆ. ಆತನಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದು, ಸ್ಟಂಟ್‌ ನ್ನು ಖರೀದಿಸಲು ಮೆಡಿಕಲ್‌ ಶಾಪ್‌ ಗೆ ಬಂದಿರುತ್ತೇನೆ. ನನ್ನ ಗೂಗಲ್‌ ಪೇ ಕಾರ್ಯನಿರ್ವಹಿಸದೇ ಇದ್ದು, ಡಾಕ್ಟರ್‌ ಗೆ ಹಣವನ್ನು ಕಳುಹಿಸಲು ಆಗುತ್ತಿಲ್ಲ. ನಿಮಗೆ ನಾನು 50,000/- ರೂಪಾಯಿ ಕಳುಹಿಸಿರುವ ಸಂದೇಶ ಬಂದಿದೆಯಾ ನೋಡಿ ಎಂದು ಹೇಳಿದ್ದಾನೆ. ಈ ವೇಳೆ ಅಶೋಕ್ ಮೊಬೈಲ್‌ ನ್ನು ಚೆಕ್‌ ಮಾಡಿದಾಗ 50,000/-ರೂಪಾಯಿ ಖಾತೆಗೆ ವರ್ಗಾವಣೆ ಆಗಿರುವ ಸಂದೇಶ ಬಂದಿರುತ್ತದೆ. ಇದನ್ನು ಸಂದೀಪ್ ಎಂಬಾತನಿಗೆ ತಿಳಿಸಿದ್ದಾರೆ. ಈ ವೇಳೆ ಸಂದೀಪ್ ಸದರಿ ಮೊತ್ತವನ್ನು ಅವರ ಹೆಂಡತಿ ಸುಭಾಶಿತಾ ರವರ ಮೊಬೈಲ್‌ ನಂಬ್ರ 9449916114 ನಿಂದ ಗೂಗಲ್‌ ಪೇ ಮುಖಾಂತರ 50,000/- ರೂಪಾಯಿಯನ್ನು ವಾಪಸ್ಸು ಕಳುಹಿಸಿರುತ್ತಾರೆ.

ಫೋನಿನಲ್ಲಿ ಮಾತನಾಡುತ್ತಿರುವಾಗಲೇ ಅದೇ ಸಮಯದಲ್ಲಿ ಆತನು ನಾನು ಇನ್ನೊಮ್ಮೆ 50,000/- ರೂಪಾಯಿ ಗಳನ್ನು ಕಳುಹಿಸಿದ್ದೇನೆ ಸಂದೇಶ ಬಂದಿದೆಯಾ ಚೆಕ್‌ ಮಾಡಿ ಎಂದು ಹೇಳಿದ್ದು, ಚೆಕ್‌ ಮಾಡಿದಾಗ 50,000/- ರೂಪಾಯಿ ಬಂದಿರುವ ಬಗ್ಗೆ ಪುನಃ ಸಂದೇಶ ಬಂದಿರುತ್ತದೆ. ಇದನ್ನು ನಂಬಿದ ಫಿರ್ಯಾದುದಾರರು ಪುನಃ 50,000/- ರೂಪಾಯಿಯನ್ನು ಅವರ ಹೆಂಡತಿ ಮೊಬೈಲ್‌ ನಂಬ್ರ 9449916114 ರಿಂದ ಗೂಗಲ್‌ ಪೇ ಮಾಡಿರುತ್ತಾರೆ. ಸ್ವಲ್ಪ ಸಮಯದ ನಂತರ ಫಿರ್ಯಾದುದಾರರು ಕಸ್ಟಮರ್‌ ಕೇರ್‌ ಗೆ ಫೋನ್‌ ಕರೆಮಾಡಿ ಬ್ಯಾಂಕ್‌ ಬ್ಯಾಲೆನ್ಸ್‌ ನ್ನು ಚೆಕ್‌ ಮಾಡಿದಾಗ ಫಿರ್ಯಾದುದಾರರಿಗೆ ಯಾವುದೇ ಹಣ ಜಮಾವಾಗಿರುವುದಿಲ್ಲ. ಆನಂತರ ಅವರ ಸ್ನೇಹಿತ ಸಂದೀಪ್‌ ರವರ ನಂಬರ್‌ ಗೆ ಫೋನ್‌ ಕರೆ ಮಾಡಿ ವಿಚಾರಿಸಿದಾಗ ಆತನು” ನಾನು ನಿಮಗೆ ಯಾವುದೇ ಕರೆ ಮಾಡಿರುವುದಿಲ್ಲ ಎಂದು ಹೇಳಿದ್ದು, ಫಿರ್ಯಾದುದಾರಿರಗೆ ಯಾರೋ ಅಪರಿಚಿತ ವ್ಯಕ್ತಿ ತಾನು ಸಂದೀಪ್‌ ನಿಮ್ಮ ಸ್ನೇಹಿತ ಎಂದು ಸುಳ್ಳು ಹೇಳಿ ಆನ್‌ ಲೈನ್‌ ನಲ್ಲಿ ಮೋಸ ಮಾಡಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 0014/2026 ಕಲಂ 318(4) BNS 66(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ

Powered by Blogger.