".

Header Ads

ಅನ್ಯಕೋಮಿನ ಯುವಕನೊಂದಿಗೆ ಲವ್ವಿಡವ್ವಿ, ಪ್ರೇಮದ ಸುಳಿಗೆ ಬಿದ್ದು ಹೆಣವಾದ 3 ಮಕ್ಕಳ ತಾಯಿ..!

 


ಆಕೆ ಮೂರು ಮಕ್ಕಳ ತಾಯಿ. ಕಳೆದ 8 ವರ್ಷಗಳಿಂದ ಗಂಡನಿಂದ ದೂರವಾಗಿದ್ದಳು. ನಂತರ ಪರಿಚಯವಾದ ಅನ್ಯಕೋಮಿನ ಯುವಕನ ಜೊತೆ ಪ್ರೀತಿಗೆ ಬಿದ್ದು ಹೆಣವಾಗಿದ್ದಾಳೆ. 32 ವರ್ಷದ ಉಮಾ ಮೃತ ಮಹಿಳೆ. ಖಾಜಾ ಹತ್ಯೆಗೈದ ಆರೋಪಿ.

ವಸ್ತು ಪ್ರದರ್ಶನದಲ್ಲಿ ಭೇಟಿಯಾದ ಈತನೊಂದಿಗೆ ಪೋನ್ ನಂಬರ್ ಎಕ್ಸ್​ಚೇಂಜ್ ಆಗುತ್ತಿದ್ದಂತೆ ಇಬ್ಬರು ವಾಟ್ಸಾಪ್ ಚಾಟಿಂಗ್, ಫೋನ್​ ಕಾಲ್ ನಲ್ಲೇ ಮೈಮರೆಯುತ್ತಾರೆ. ಉಮಾ ಯಾವಾಗ ಖಾಜಾನ ಪ್ರೀತಿಯಲ್ಲಿ ಬಿದ್ದರೋ, ಆಗ ಅವರು ಮನೆ-ಮಕ್ಕಳು ಎಲ್ಲವನ್ನ ಮರೆತಿದ್ದಾರೆ. ಮೂರು ಹೊತ್ತು ಖಾಜಾನ ಜೊತೆಗೆ ಮಾತು, ಚಾಟಿಂಗ್, ಡೇಟಿಂಗ್ ಜೋರಾಗಿತ್ತು. ಪರಿಚಯವಾಗಿ 8 ತಿಂಗಳ ಕಳೆದಿತ್ತು.  ಮನೆಯವರಿಗೆ ಹೇಳದೇ ಕಳೆದ ನಾಲ್ಕು ತಿಂಗಳ ಹಿಂದೆ ಇಬ್ಬರು ಗುಪ್ತವಾಗಿ ಮದುವೆ ಕೂಡ ಆಗಿದ್ದರಂತೆ.ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಹಣದ ವಿಚಾರ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜೊತೆಗೆ ಖಾಜಾನಿಗೆ ಉಮಾಳ ಸೌಂದರ್ಯ, ಆಕೆಯ ಮಾತು ತೆಲೆಕೆಡಿಸಿತ್ತು. ಬರುಬರುತ್ತ ಆಕೆಯ ಮೇಲೆ ಅನುಮಾನ ಪಡೋದಕ್ಕೆ ಶುರು ಮಾಡಿದ್ದ. ಉಮಾಳ ಕರೆ ಬ್ಯುಸಿ ಬಂದ್ರೆ ಸಾಕು ರಂಪ ರಾಮಾಯಣ ಮಾಡುತ್ತಿದ್ದನಂತೆ.

ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೇರಿ ಹರಿತವಾದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ರೈಲ್ವೆ ಸ್ಟೇಷನ್ ಸ್ಟಾಲ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಉಮಾ ಬೆಳಗಿನ ಜಾವ 4:30ಕ್ಕೆ ಮನೆಯಿಂದ ಆಚೆ ಹೋದವಳು ವಾಪಾಸ್ ಮನೆಗೆ ಬಂದಿಲ್ಲ. ಇತ್ತ ಗಾಬರಿಯಾಗಿದ್ದ ಮನೆಮಂದಿ ಉಮಾಳನ್ನು ಹುಡುಕಾಡಿದ್ದಾರೆ. ಸಂಬಂಧಿಕರಿಗೆ, ಸ್ನೇಹಿತರಗೆ ಫೋನ್​ ಮಾಡಿ ವಿಚಾರಿಸಿದ್ದಾರೆ. ಆದರೆ ಯಾವುದು ಪ್ರಯೋಜವಾಗಿಲ್ಲ. ಇತ್ತ ಮನೆ ಪಕ್ಕದಲ್ಲಿ ಬೆಕ್ಕುಗಳ ಕಾದಾಟ ಮಾಡುತ್ತಿದ್ದವು. ಬೆಕ್ಕುಗಳು ಯಾಕಿಷ್ಟು ಕಾದಾಡುತ್ತಿವೆ. ಅಂತ ಮನೆ ಮಹಡಿ ನೋಡಲು ಹೋಗಿದ್ದ ಪಕ್ಕದ ಮನೆಯವರಿಗೆ ಉಮಾಳ ಶವ ಕಂಡಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹ ಕಂಡು ಆತಂಕಗೊಂಡಿದ್ದಾರೆ.

ಘಟನೆ ನಡೆದ 4 ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲೇ ತಂದೆಯಿಂದ ದೂರವಿದ್ದ ಮಕ್ಕಳು ಇದೀಗ ತಾಯಿ ಇಲ್ಲದೆ ತಬ್ಬಲಿಗಳಾಗಿವೆ.

Powered by Blogger.