".

Header Ads

ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯ ಸಂಭ್ರಮ,ಮಲೆಗೆ ತೆರಳುತ್ತಿದ್ದ 5000 ಕರ್ನಾಟಕ ಭಕ್ತರಿಗೆ ಕೇರಳ ಪೊಲೀಸ್ ತಡೆ

 


ಸಿದ್ಧ ಕೇರಳದ ಶಬರಿಮಲೆ ಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಶಬರಿಮಲೆ 'ಅಯ್ಯಪ್ಪ ಸ್ವಾಮಿ ದೇವರ' ದರ್ಶನಕ್ಕೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು, ಆಗಮಿಸುತ್ತಿದ್ದು, ಮಕರ ಸಂಕ್ರಾಂತಿ ದಿನದಂದು ಕಾಣುವ 'ಜ್ಯೋತಿ' ದರ್ಶನ ಪಡೆದು ಪುನೀತರಾಗಲಿದ್ದಾರೆ.ಈ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಮಕರ ಜ್ಯೋತಿ (ಮಕರವಿಳಕ್ಕು) ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಸಂಬಂಧ ವಿಶೇಷ ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಶಬರಿಮಲೆಯಲ್ಲಿ ಜ್ಯೋತಿ ದರ್ಶನದ ಸಮಯ ಅತ್ಯಧಿಕ ಜನದಟ್ಟಣೆ ಉಂಟಾಗಲಿದೆ.ಶಬರಿಮಲೆನಲ್ಲಿ  ಮಕರ ಸಂಕ್ರಾಂತಿಗೆ ಜ್ಯೋತಿ ದರ್ಶನಕ್ಕೆ ತೆರಳುತ್ತಿದ್ದ ಕರ್ನಾಟಕದ ಸಾವಿರಾರು ಭಕ್ತರಿಗೆ ಕೇರಳ ಪೊಲೀಸರು ತಡೆ ನೀಡಿದ್ದಾರೆ. ಶಬರಿಮಲೆಗೂ ದೂರದ 60 ಕಿಲೋ ಮೀಟರ್ ಪ್ರದೇಶದಲ್ಲಿ ದಾರಿ ಮಧ್ಯೆ ಭಕ್ತರ ವಾಹನಗಳಿಗೆ ತಡೆ ನೀಡಿ, ಕೇರಳದ ಬಸ್‌ಗಳಲ್ಲಿ ತೆರಳುವಂತೆ ಸೂಚನೆ ನೀಡಿದ್ದಾರೆ.ಈ ಹಿನ್ನೆಲೆ ಅನೇಕ ಭಕ್ತರಿಗೆ ತೊಂದರೆ ಆಗಿದ್ದು, ಪೊಲೀಸರ ತಾರತಮ್ಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಮಧ್ಯೆ ಕೂತು ಪ್ರತಿಭಟಿಸಿದ ಘಟನೆ ಮಂಗಳವಾರ (ಜ.13) ರಂದು ಮಧ್ಯಾಹ್ನ ನಡೆದಿದೆ.ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ಶಬರಿಮಲೆ ವ್ಯಾಪ್ತಿಯಲ್ಲಿ ಸೂಕ್ತ ಭದ್ರತೆ, ಸೀಮಿತ ಜನರಿಗೆ ಜ್ಯೋತಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಕ್ರಮವೇ ಇದೀಗ ಭಕ್ತರಿಗೆ ಸಮಸ್ಯೆ ತಂಡೊದ್ದಿದೆ ಎನ್ನಲಾಗಿದೆ. ಅಲ್ಲದೇ ಕೇರಳ ಪೊಲೀಸರು ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಕರ್ನಾಟಕದ ಭಕ್ತರು ಆರೋಪಿಸಿದ್ದಾರೆ.ಸಾಮಾನ್ಯವಾಗಿ 60 ಕಿಲೋ ಮೀಟರ್ ದೂರಕ್ಕೆ 80 ರೂಪಾಯಿ ದರ ಇರುತ್ತದೆ. ಆದರೆ ಕೇರಳ ಸರ್ಕಾರವು 250 ರೂಪಾಯಿ ನಿರ್ದಿಷ್ಟ ಮೊತ್ತ ನಿಗದಿ ಮಾಡಿ ಸುಲಿಗೆ ಮಾಡುತ್ತಿದೆ. ಕರ್ನಾಟಕದ ಭಕ್ತಾಧಿಗಳಿಗೆ ಅನಾನುಕೂಲವಾಗುತ್ತಿದ್ದು, ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.

Powered by Blogger.