".

Header Ads

ಗ್ರಾಹಕರ ಹೆಸರಿನಲ್ಲಿ ಕೋಟ್ಯಾಂತರ ರೂ. ವಂಚಿಸಿ ಪರಾರಿ: ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕನ ಪತ್ತೆಗೆ ವಿಶೇಷ ತಂಡ ರಚನೆ

 


ಗ್ರಾಹಕರ ಹೆಸರಿನಲ್ಲಿ ಕೆನರಾ ಬ್ಯಾಂಕ್‌ನ ಶಾಖೆಯೊಂದಕ್ಕೆ ಮೂರು ಕೋಟಿಗೂ ಹೆಚ್ಚು ವಂಚಿಸಿ ಪರಾರಿಯಾಗಿರುವ ಹಿರಿಯ ವ್ಯವಸ್ಥಾಪಕ ಎನ್.ರಘು ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ

ಗ್ರಾಹಕರ ಹೆಸರಿನಲ್ಲಿ ಚಿನ್ನದ ಸಾಲ ತೆಗೆದುಕೊಂಡು ನಾಪತ್ತೆ ಆಗಿರುವ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಬೆಂಗಳೂರಿನ ಕೆನರಾ ಬ್ಯಾಂಕ್‌‌ನ ಮಲ್ಲೇಶ್ವರ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕಬೀಂದ್ರ ಕುಮಾರ್ ಸಾಹು ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿತ್ತು.

ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, ಆರೋಪಿ ಆಂಧ್ರಪ್ರದೇಶದಲ್ಲಿ ಅಡಗಿರುವ ಸುಳಿವು ಸಿಕ್ಕಿದೆ. ಉತ್ತರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದ ವಿಶೇಷ ತಂಡ ಆಂಧ್ರಪ್ರದೇಶಕ್ಕೆ ತೆರಳಿ, ಆರೋಪಿಯ ಬಂಧನಕ್ಕೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ರಘು ಅವರು 40ಕ್ಕೂ ಹೆಚ್ಚು ಗ್ರಾಹಕರ ಹೆಸರಿನಲ್ಲಿ ಚಿನ್ನದ ಮೇಲೆ ಸಾಲ ಪಡೆದು, ಆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಬ್ಯಾಂಕ್-ಗ್ರಾಹಕರಿಗೆ ವಂಚಿಸಿದ್ದಾರೆ. ‘ಮನೆಯಲ್ಲಿ ಕಷ್ಟವಿದೆ. ನಿಮ್ಮ ಹೆಸರಲ್ಲಿ ಸಾಲ ತೆಗೆದುಕೊಳ್ಳುತ್ತೇನೆ. ನನ್ನ ಬಳಿ ಚಿನ್ನವಿದ್ದು ಅದನ್ನು ಅಡಮಾನ ಇರಿಸಿ ಬ್ಯಾಂಕ್‌ನಲ್ಲಿ ಟ್ಟು ಸಾಲ ತೆಗೆದುಕೊಳ್ಳುತ್ತೇನೆ’ ಎಂಬುದಾಗಿ ಗ್ರಾಹಕರಿಗೆ ನಂಬಿಸುತ್ತಿದ್ದರು. ಕೆಲವು ಗ್ರಾಹಕರಿಂದ ಸಹಿ ಪಡೆದು ಸಾಲ ಪಡೆದುಕೊಂಡಿದ್ದಾರೆ” ಎಂದು ಪೊಲೀಸರು ಹೇಳಿದರು

‘ಮ್ಯಾನೇಜರ್ ಮಾತು ನಂಬಿದ್ದ ಗ್ರಾಹಕರು, ಬ್ಯಾಂಕ್‌ ಖಾತೆಯ ವಿವರ, ಆಧಾರ್ ಕಾರ್ಡ್, ಒಟಿಪಿ ನೀಡಿದ್ದರು. ಜತೆಗೆ ರಘು ಅವರು ಚೆಕ್ ಸಹ ಪಡೆದುಕೊಂಡು, ಗ್ರಾಹಕರ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿಕೊಳ್ಳುತ್ತಿದ್ದರು’ ಎಂದು ತಿಳಿಸಿದರು.

ಬ್ಯಾಂಕಿನ ಮಾರ್ಗಸೂಚಿ ಪ್ರಕಾರ ಚಿನ್ನದ ಸಾಲಗಳ ತ್ರೈಮಾಸಿಕ ಮರುಮೌಲ್ಯಮಾಪನ ಹಾಗೂ ಲೆಕ್ಕ ಪರಿಶೋಧನೆ ನಡೆಸಲಾಗಿತ್ತು. ಆಗ, 41 ಸಾಲಗಳು ಕಾಲ್ಪನಿಕ ಸ್ವರೂಪದವು ಎಂಬುದು ಪತ್ತೆಯಾಗಿತ್ತು. ಅಲ್ಲದೇ, ಚಿನ್ನದ ಆಭರಣಗಳು ಇರಲಿಲ್ಲ ಎಂಬುದು ಲೆಕ್ಕ ಪರಿಶೋಧನೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು.

Powered by Blogger.