".

Header Ads

ಉಡುಪಿ:- ರಿವರ್ಸ್ ತೆಗೆಯುವ ವೇಳೆ ಅವಘಡ; ಬೈಕ್, ಆಟೋಗೆ ಡಿಕ್ಕಿಯಾಗಿ ಅಂಗಡಿಗೆ ನುಗ್ಗಿದ ಕಾರು

 


ರಿವರ್ಸ್ ತೆಗೆಯುವ ವೇಳೆ ಚಾಲಕ ನಿಯಂತ್ರಣ ತಪ್ಪಿದ ಕಾರೊಂದು ದ್ವಿಚಕ್ರ ವಾಹನ ಮತ್ತು ಆಟೋಗೆ ಡಿಕ್ಕಿಯಾಗಿ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಉಡುಪಿ ಜಾಮೀಯಾ ಮಸೀದಿ ಸಮೀಪದ ಐರೋಡಿ ಬಿಲ್ಡಿಂಗ್ ಬಳಿ ನಡೆದಿದೆ.ಐರೋಡಿ ಬಿಲ್ಡಿಂಗ್ ಬಳಿ ಪಾರ್ಕ್ ಮಾಡಿದ್ದ ಕಾರನ್ನು ರಿವರ್ಸ್ ತೆಗೆಯುವ ವೇಳೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಅತೀ ವೇಗದಿಂದ ಪರಿವಾರ್ ಸ್ವೀಟ್ ಅಂಗಡಿಯ ಕಡೆಗೆ ಹಿಮ್ಮುಖವಾಗಿ ಚಲಿಸಿದೆ. ಇದರ ಪರಿಣಾಮ ಸಿಟಿ ಸೆಂಟರ್ ಮಾರ್ಗದಿಂದ ಸಂಸ್ಕೃತ ಕಾಲೇಜು ಕಡೆಗೆ ಸಾಗುತ್ತಿದ್ದ ಬೈಕ್ ಹಾಗೂ ಆಟೋಗೆ ಡಿಕ್ಕಿಯಾಗಿದೆ.ಬಳಿಕ ಕಾರು ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಗುದ್ದಿ ಚಿಪ್ಸ್ ಅಂಗಡಿಯೊಂದಕ್ಕೆ ನುಗ್ಗಿದೆ‌. ಘಟನೆಯಿಂದ ಬೈಕ್ ಸವಾರ ಹಾಗೂ ಆಟೋ ಚಾಲಕ ಗಾಯಗೊಂಡಿದ್ದಾರೆ. ಈ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Powered by Blogger.