".

Header Ads

ರಶ್ ಇದ್ದ ಬಸ್ ನಲ್ಲಿ ಲೈಂಗಿಕ ದೌರ್ಜನ್ಯ ಎಂದು ವಿಡಿಯೋ ವೈರಲ್ ಮಾಡಿದ ಯುವತಿ – ಯುವಕ ಆತ್ಮಹತ್ಯೆಗೆ ಶರಣು

 


ತುಂಬಾ ರಶ್ ಬಸ್ ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ವಿಡಿಯೋ ಮಾಡಿ ವೈರಲ್ ಮಾಡಿದ್ದು, ಇದೀಗ ವಿಡಿಯೋದಲ್ಲಿದ್ದ ಯುವಕ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.ಆತ್ಮಹತ್ಯೆ ಮಾಡಿಕೊಂಡ ಆರೋಪ ಹೊತ್ತಿದ್ದ ಕೋಝಿಕ್ಕೋಡ್‌ನ ಗೋವಿಂದಪುರಂ ಮೂಲದ ದೀಪಕ್(40) ಎಂದು ಗುರುತಿಸಲಾಗಿದೆ. ಪಯ್ಯನ್ನೂರಿನಲ್ಲಿ ಈ ಘಟನೆ ನಡೆದಿದೆ.
 ಜನದಟ್ಟಣೆಯ ಬಸ್ಸಿನಲ್ಲಿ ಲೈಂಗಿಕ ಉದ್ದೇಶದಿಂದ ಅವನು ಉದ್ದೇಶಪೂರ್ವಕವಾಗಿ ತನ್ನನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸುಮಾರು 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ ಮತ್ತು ಅನೇಕ ಜನರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. 

ವಿಡಿಯೋ ವೈರಲ್ ಆದ ನಂತರ ದೀಪಕ್ ತುಂಬಾ ದುಃಖಿತನಾಗಿದ್ದ, ವಿಡಿಯೋ ವೈರಲ್ ಆದ ಮರುದಿನ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.ಇದೀಗ ಈ ಪ್ರಕರಣ ಬಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಯುವತಿ ತನ್ನ ವಿಡಿಯೋ ವೈರಲ್ ಆಗಲು ಈ ರೀತಿ ಮಾಡಿ, ಒಬ್ಬ ಅಮಾಯಕನ ಜೀವ ತೆಗೆದಿದ್ದಾಳೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





Powered by Blogger.