ಶಬರಿಮಲೆಗೆ ಹೋಗಿ ಬಂದು ಪತ್ನಿಯನ್ನು ಹತ್ಯೆಗೈದ ಪತಿ !
ಅವರಿಬ್ಬರಿಗೆ ಮದುವೆಯಾಗಿ 22 ವರ್ಷಗಳಾಗಿತ್ತು. ಆದ್ರೆ, ಅದೇನಾಯ್ತೋ ಗೊತ್ತಿಲ್ಲ ನಾಲ್ಕು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ನಡುವೆ ಪತಿ ಅಯ್ಯಪ್ಪ ಮಾಲೆ ಹಾಕಿದ್ದ. ಇರುಮುಡಿ ಕಟ್ಟುವ ವೇಳೆ ಪತ್ನಿಯ ಸ್ಥಾನದಲ್ಲಿ ಬೇರೊಬ್ಬ ಮಹಿಳೆ ಪೂಜೆ ಸಲ್ಲಿಸಿದ್ದಾಳೆ. ಈ ವಿಚಾರ ತಿಳಿದ ಪತ್ನಿ ಪತಿಯನ್ನು ತರಾಟೆಗೆ ತೆಗೆದುಕೊಳ್ಳಲು ಹೋಗಿ ಹೆಣವಾಗಿದ್ದಾಳೆ. ಈ ಘಟನೆ ನಡೆದಿರೋದು ಹಾಸನದ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ.40 ವರ್ಷದ ರಾಧಾ ಕೊ*ಲೆಯಾದ ಪತ್ನಿ. ಕುಮಾರ್ ಕೊಲೆಗೈದ ಪತಿ. ಶಬರಿಮಲೆಗೆ ಹೋಗಿ ಬಂದ ದಿನವೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪತಿಯ ಎರಡನೇ ಮದುವೆ ಬಗ್ಗೆ ರಾಧಾ ಪ್ರಶ್ನಿಸಿದ್ದು, ಇಬ್ಬರ ನಡುವೆ ಭಾರೀ ಜಗಳ ನಡೆದಿದೆ. ಗಲಾಟೆ ತಾರಕಕ್ಕೇರಿ ಈ ವೇಳೆ ಕುಮಾರ್, ರಾಧಾಳನ್ನ ಕೊಲೆಗೈದಿದ್ದಾನೆ.ಬಳಿಕ ಆಕೆಯ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಬೈಕ್ ನಲ್ಲಿ ಕೊಂಡೊಯ್ದು ಯಗಚಿ ನದಿಗೆ ಎಸೆದಿದ್ದ ಎನ್ನಲಾಗಿದೆ. ಸದ್ಯ ಆಲೂರು ಠಾಣೆ ಪೊಲೀಸರು ಪತಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Post a Comment