ಕಂಬಳದ ಕೋಣಗಳನ್ನು ಮಕ್ಕಳಿಗಿಂತ ಜಾಸ್ತಿ ಪ್ರೀತಿ ಮಾಡ್ತೀರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕರಾವಳಿ ಕರ್ನಾಟಕದಲ್ಲಿ ಕಂಬಳ ನೋಡಿದರೆ ಮೈಯೆಲ್ಲಾ ರೋಮಾಂಚನವಾಗುತ್ತದೆ. ಕೋಣಗಳ ಜೊತೆ ಓಡಬೇಕಾದರೆ ನಮಗೆ ಭಯ ಆಗುತ್ತೆ. ಓಟಗಾರರು ಉಸೇನ್ ಬೊಲ್ಟ್ ಗಿಂತ ಜೋರಾಗಿ ಓಡ್ತಾ ಇದ್ರು. ಕಂಬಳದ ಕೋಣಗಳನ್ನು ಮಕ್ಕಳಿಗಿಂತ ಜಾಸ್ತಿ ಪ್ರೀತಿ ಮಾಡ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ಉಳ್ಳಾಲ ತಾಲೂಕಿನ ನರಿಂಗಾನದಲ್ಲಿ ಆಯೋಜಿಸಲಾಗಿದ್ದ ಲವ-ಕುಶ ಜೋಡುಕರೆ ಕಂಬಳದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾಗವಹಿಸಿದ್ದರು. ಕೋಣಗಳ ಓಟಕ್ಕೆ ಸಚಿವೆ ಫಿದಾ ಆಗಿದ್ದು, ಸ್ಪೀಕರ್ ಯು.ಟಿ ಖಾದರ್ ಅವರ ನಾಯಕತ್ವದಲ್ಲಿ ಕಂಬಳ ಆಯೋಜಿಸಲಾಗಿತ್ತು.ವೇದಿಕೆಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕರಾವಳಿ ಕರ್ನಾಟಕದ ವಿಶೇಷ ಸಂಸ್ಕೃತಿ ಈ ಕಂಬಳ. ಕಂಬಳದಲ್ಲಿ ಜನರು ಎಷ್ಟೊಂದು ಮಗ್ನರಾಗಿರುತ್ತಾರೆ ಅಂದ್ರೆ ಯಾವ ಜಾತಿನೂ ಇಲ್ಲ, ಶ್ರೀಮಂತಿಕೆನೂ ಇಲ್ಲ, ಯಾವ ಭಾಷೆನೂ ಇಲ್ಲ, ಯಾವ ಬಡತನನೂ ಇಲ್ಲ. ಎಲ್ಲರೂ ಒಂದೇ ಎನ್ನುವ ಭಾವದಿಂದ ಕಂಬಳದ ಸವಿಯನ್ನ ಸವಿಯುತ್ತಿದ್ದೀರ ಎಂದು ಕಂಬಳದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು.ಇದೇ ವೇಳೆ ಉತ್ತರ ಕರ್ನಾಟಕದ ಹೋರಿ ಷರಿಯತ್ತು ನೆನಪಿಸಿಕೊಂಡ ಸಚಿವೆ, ರೈತರು ಬಹಳ ಉತ್ಸಾಹದಿಂದ ಅದರಲ್ಲಿ ಪಾಲ್ಗೋಳ್ಳುತ್ತಾರೆ. ಅದೇ ರೀತಿ ಕರಾವಳಿ ಕಂಬಳವು ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದ್ದಾರೆ.

Post a Comment