ಬಿಎಂಡಬ್ಲ್ಯೂ ಕಾರು ಮತ್ತು ಲಾರಿ ನಡುವೆ ಅಪಘಾತ; ಮಂಗಳೂರು ಮೂಲದ ಇಬ್ಬರು ಸಾವು
ಬಿಎಂಡಬ್ಲ್ಯೂ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಮಂಗಳೂರು ಮೂಲದ ಇಬ್ಬರು ಸಾವನಪ್ಪಿದ ಘಟನೆ ನಿನ್ನೆ ರಾತ್ರಿ(ಜ.19) ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ತೆಕ್ಕಿಲ್ ಎಂಬಲ್ಲಿ ನಡೆದಿದೆ.ಸಜಿಪ ಬೈಲಗುತ್ತುವಿನ 41 ವರ್ಷದ ಆಸಿಫ್ ಮುಹಮ್ಮದ್, ನಾಟೆಕಲ್ ನಿವಾಸಿ 23 ವರ್ಷದ ಶಫೀಕ್ ಮೃತಪಟ್ಟವರು. ಘಟನೆಯಲ್ಲಿ ಮಂಜೇಶ್ವರ ಮೂಲದ ಮೂವರಿಗೆ ಗಾಯಗಳಾಗಿವೆ.ವಯನಾಡಿಗೆ ತೆರಳಿದ್ದ ಐವರು ಗೆಳೆಯರು, ಸೋಮವಾರ ರಾತ್ರಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಹಾಗೂ ಲಾರಿ ನಡುವೆ ಅಪಘಾತವಾಗಿದೆ.ಗಂಭೀರವಾಗಿ ಗಾಯಗೊಂಡಿದ್ದ ಆಸಿಫ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಫೀಕ್ ಚಿಕಿತ್ಸೆ ಫಲಿಸದೆ ಇಂದು(ಜ.20) ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಗೂ ಹಾನಿಯಾಗಿದೆ.

Post a Comment