".

Header Ads

ಉಡುಪಿ: ಬೈಕ್ ಕಳವು ಪ್ರಕರಣ; ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ


 ಉಡುಪಿ ಕರಾವಳಿ ಬೈಪಾಸ್ ಬಳಿ ಕೆಲ ದಿನಗಳ ಹಿಂದೆ ನಡೆದ ಬೈಕ್ ಕಳ್ಳತನಕ್ಕೆ ಸಂಬಂಧಿಸಿ ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ ಆಶಿಕ್ ಅನ್ಸಾರ್(19) ಹಾಗೂ ಅಲ್ತಾಫ್(23) ಎಂಬ ಇಬ್ಬರು ಅಂತರಾಜ್ಯ ಕಳವು ಆರೋಪಿಗಳನ್ನು ಉಡುಪಿ ಪೊಲೀಸರು ಜನವರಿ 4ರಂದು ಕೇರಳ ರಾಜ್ಯದ ಕೋಯಿಕ್ಕೋಡು ಜಿಲ್ಲೆ ಮುಕ್ಕಂ ಎಂಬಲ್ಲಿ ಬಂಧಿಸಿದ್ದಾರೆ.

ಆರೋಪಿಗಳಿಂದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಮೂಡನಿಡಂಬೂರು ಗ್ರಾಮದ ನಾಗಚಂದ್ರ ಎಂಬವರು ಡಿ.28ರಂದು ರಾತ್ರಿ ಕರಾವಳಿ ಬೈಪಾಸ್ ಬಳಿ ನಿಲ್ಲಿಸಿದ್ದ 70,000 ರೂ. ಮೌಲ್ಯದ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಒಂದು ಮನೆಕಳ್ಳತನ ಪ್ರಕರಣ, ಇನ್ನೊಂದು ಗಾಂಜಾ ಸೇವನೆ ಪ್ರಕರಣಗಳಾಗಿವೆ.ಅಲ್ತಾಫ್ ವಿರುದ್ಧ ಕೇರಳ ರಾಜ್ಯದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 3 ಕಳ್ಳತನ ಪ್ರಕರಣಗಳು, 2 ಗಾಂಜಾ ಸೇವನೆ ಪ್ರಕರಣ ಪ್ರಕರಣಗಳಾಗಿವೆ.

Powered by Blogger.