ಮಗನ ಅಗಲಿಕೆ ಸಹಿಸಲಾರದೆ ದಂಪತಿ ಆತ್ಮಹತ್ಯೆ
ಏಕೈಕ ಮಗನ ಅಗಲಿಕೆಯನ್ನು ಸಹಿಸಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ವೇಣುಗೋಪಾಲನ್ ಮತ್ತು ಸ್ಮಿತಾ ಆತ್ಮಹತ್ಯೆ ಮಾಡಿಕೊಂಡ ದಂಪತಿ.ಕಳೆದ ಡಿಸೆಂಬರ್ 29ರಂದು ಬೇಕಲ್ ಬೀಚ್ ಉತ್ಸವದ ಸಂದರ್ಭದಲ್ಲಿ ನಡೆದ ರೈಲು ಅಪಘಾತದಲ್ಲಿ ವೇಣುಗೋಪಾಲನ್, ಸ್ಮಿತಾ ದಂಪತಿಯ ಪುತ್ರ, 19 ವರ್ಷದ ಶಿವಾನಂದನ್ ಮೃತಪಟ್ಟಿದ್ದ. ಇದಾದ ಬಳಿಕ ದಂಪತಿ ಸಾಮಾಜಿಕ ಜೀವನದಿಂದ ದೂರ ಉಳಿದಿದ್ದರು.ಪ್ರತಿದಿನ ರಾತ್ರಿ ಒಬ್ಬ ಸಂಬಂಧಿಕರು ಅವರ ಮನೆಯಲ್ಲಿ ಉಳಿಯುತ್ತಿದ್ದರು. ಆದರೆ, ಗುರುವಾರ(ಮಾ.12) ರಾತ್ರಿ ಮನೆಯಲ್ಲಿ ದಂಪತಿ ಮಾತ್ರ ಇದ್ದು, ಸಾವಿನ ದಾರಿ ಹಿಡಿದಿದ್ದಾರೆ

Post a Comment