".

Header Ads

ಕಾರ್ಕಳ :ಬೈಕ್ ಮುಖಾಮುಖಿ ಢಿಕ್ಕಿಯಾಗಿ ಓರ್ವ ಸಾವು, ಇನ್ನೋರ್ವನಿಗೆ ಗಾಯ

 

 ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ನಿನ್ನೆ ಸಂಜೆ ಬೈಕ್ ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವನ್ನಪ್ಪಿದರೆ, ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಕೂಟರ್ ಸವಾರ ಹರೀಶ್ ಸುವರ್ಣ ಮೃತಪಟ್ಟ ದುರ್ದೈವಿ.

 ಮಾ.18 ಸಂಜೆ ಸಾಣೂರು ರಾಮ ಮಂದಿರದ ಬಳಿ ಇರುವ ಅಮ್ಮ ಹೊಟೇಲ್ ಮುಂದುಗಡೆ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಸುಕೇಶ್ ಎಂಬವರ ಬೈಕ್ ಮತ್ತು ಕಾರ್ಕಳ ಕಡೆಯಿಂದ ಸಾಣೂರು ಕಡೆಗೆ ಹೋಗುತ್ತಿದ್ದ ಹರೀಶ್ ಸುವರ್ಣ ಎಂಬವರ ಸ್ಕೂಟರ್ ಮುಖಾಮುಖಿ ಢಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಎರಡೂ ವಾಹನಗಳ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದು, ಆ ಪೈಕಿ ಹರೀಶ್ ಸುವರ್ಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ. ಬೈಕ್ ಸವಾರ ಸುಕೇಶ್ ಸಣ್ಣಪುಟ್ಟ ಗಾಯಗಳೊಂದಿಗೆ  ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Powered by Blogger.