".

Header Ads

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಜೆಸಿಐ ಬೆಳ್ಮಣ್ ಹಾಗೂ ಚೈತನ್ಯ ಮಿತ್ರಮಂಡಳಿ ಕಲ್ಯಾ (ರಿ.) ಚೈತನ್ಯ ಮಹಿಳ ಹಾಗೂ ಯುವತಿ ಮಂಡಳಿ ಕಲ್ಯಾ ಅವರ ಜಂಟಿ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ

 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಸಿಐ ಬೆಳ್ಮಣ್ ಹಾಗೂ ಚೈತನ್ಯ ಮಿತ್ರಮಂಡಳಿ ಕಲ್ಯಾ (ರಿ.)  ಚೈತನ್ಯ ಮಹಿಳ ಹಾಗೂ ಯುವತಿ ಮಂಡಳಿ  ಕಲ್ಯಾ ಅವರ ಜಂಟಿ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ವಲಯ ತರಬೇತುದಾರರಾದ ಜೆಸಿ ಜಯಂತಿ ಶೆಟ್ಟಿ ಅವರು ಪ್ರೇರಣಾದಾಯಕ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ಶಶಿಕಲಾ ಶೆಟ್ಟಿ (ಕಾಶಿ ಪರಾರಿ ಬೋಳ) ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
 ಜೊತೆಗೆ ಮಹಿಳೆಯರಿಗಾಗಿ ಮನರಂಜನಾತ್ಮಕ ಆಟಗಳು ಹಾಗೂ ವಿವಿಧ ಕಾರ್ಯಕ್ರಮಗಳು ವಿಶೇಷವಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸರ್ ವೀರೇಂದ್ರ ಆರ್.ಕೆ – ಅಧ್ಯಕ್ಷರು, ಜೆಸಿಐ ಬೆಳ್ಮಣ್, ಶ್ರೀಮತಿ ಜಯಂತಿ ಶೆಟ್ಟಿ – ವಲಯ ತರಬೇತುದಾರರು, ಶ್ವೇತಾ ಆಚಾರ್ಯ – ಕಾರ್ಯದರ್ಶಿ, ಜೆಸಿಐ ಬೆಳ್ಮಣ್, ಧೀರಜ್ ಶೆಟ್ಟಿ – ಅಧ್ಯಕ್ಷರು, ಚೈತನ್ಯ ಮಿತ್ರಮಂಡಳಿ, ಕವಿತಾ ಗುರುಮೂರ್ತಿ – ಅಧ್ಯಕ್ಷರು, ಚೈತನ್ಯ ಮಹಿಳಾ ಮಂಡಳಿ, ಶ್ರೀಮತಿ ಉಷಾ ವಿವೇಕ್ – ಅಧ್ಯಕ್ಷರು, ಸುರಭಿ ಮಹಿಳಾ ಮಂಡಳಿ ಹಾಗೂ ರೂಪಾ ಯತೀಶ್ – ಸ್ಥಾಪಕ ಅಧ್ಯಕ್ಷರು, ಚೈತನ್ಯ ಮಹಿಳಾ ಮಂಡಳಿ ಉಪಸ್ಥಿತರಿದ್ದರು.  








Powered by Blogger.