ರಾಜ್ಯದ ಹಲವೆಡೆ ಬೇಸಿಗೆ ಮಳೆ: ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಸಾವು!
ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಭರ್ಜರಿಯಾಗಿಯೇ ಸುರಿದಿದೆ. ಈ ನಡುವೆ ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. ಗುಡುಗು ಸಿಡಿಲಿನೊಂದಿಗೆ ಕೆಲವೆಡೆ ಆಲಿಕಲ್ಲು ಮಳೆ ಬಿದ್ದಿದ್ದು, ಹಾಸನದಲ್ಲಿ ಮಳೆ ಗಾಳಿಗೆ ಮರದ ರಂಬೆ ಕೊಂಬೆಗಳು ಬಿದ್ದಿವೆ.
ಉಡುಪಿ , ಕಾರ್ಕಳ, ಹಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಿಂದ ಬಿಸಿಲಿನ ತಾಪದಲ್ಲಿದ್ದ ಜನತೆ ಮೊದಲ ಮಳೆ ಕಂಡು ಉಲ್ಲಸಿತರಾದರು. ಉಡುಪಿ ಜಿಲ್ಲೆಯ ರಾತ್ರಿ ಕೆಲವೆಡೆ ಸಿಡಿಲು-ಗುಡುಗು ಸಹಿತ ಮಳೆಯಾಗಿದೆ.

Post a Comment