ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದ ಕಾಲಾವಧಿ ನೇಮೋತ್ಸವದ ಅಕ್ಕರೆಯ ಕರೆಯೋಲೆ...

ಶ್ರೀ ಕ್ಷೇತ್ರ ಕುಂಟಾಡಿ - ಶ್ರೀ ರಕ್ತೇಶ್ವರಿ ದೈವಸ್ಥಾನ, ಕುಂಟಾಡಿ

ಶ್ರೀ ಕ್ಷೇತ್ರ ಕುಂಟಾಡಿ - ಶ್ರೀ ರಕ್ತೇಶ್ವರಿ ದೈವಸ್ಥಾನ, ಕುಂಟಾಡಿ
ದೇವಾಲಯಗಳ ನಗರಿ ಉಡುಪಿ
ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಅನಾದಿ ಕಾಲದಿಂದಲೂ ಆಸ್ತಿಕರ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತಿವ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿರುವ ಕುಂಟಾಡಿ "ಶ್ರೀ ರಕ್ತೇಶ್ವರಿ ದೈವಸ್ಥಾನ"ದ ಕಾಲಾವಧಿ
ನೇಮೋತ್ಸವವು ಇದೇ ಬರುವ ದಿನಾಂಕ: 09-04-2026ನೇ ಗುರುವಾರದಿಂದ -ದಿನಾಂಕ: 19-04-2026ನೇ ಭಾನುವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.
12-04-2026 ಭಾನುವಾರ: ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು.
14-04-2026 ಮಂಗಳವಾರ: ಕುಂಟಾಡಿ ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಗಳ ಕಾಲಾವಧಿ ನೇಮೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿರುವುದು.
18-04-2026 ಶನಿವಾರ: ಶ್ರೀ 'ಮಹಾ ರಥೋತ್ಸವ ಹಾಗೂ ಅನ್ನಸಂತರ್ಪಣೆ
ನಡೆಯಲಿರುವುದು.
ಸನ್ನಿಧಾನದಲ್ಲಿ ಕಾರ್ಯಕ್ರಮಗಳು:-
09-04-2026 ರಿಂದ 13-04-2026ರವರೆಗೆ: ಪ್ರತಿದಿನ ಸಂಜೆ ಗಂಟೆ 5.00ಕ್ಕೆ ಚೆಂಡು .

10-04-2026ನೇ ಶುಕ್ರವಾರ: ಸಂಜೆ ಗಂಟೆ 6.00ಕ್ಕೆ "ತೋರಣ ಮುಹೂರ್ತ".
11-04-2026ನೇ ಶನಿವಾರ: ಬೆಳಿಗ್ಗೆ ಗಂಟೆ 9.30ಕ್ಕೆ ಬೆರ್ಮನ ಬೆಟ್ಟು ನಾಗಬನದಲ್ಲಿ ತಂಬಿಲ ಸೇವೆ,
ಸಂಜೆ 4.00 ಕ್ಕೆ ದೈವಗಳ ಭಂಡಾರ ತೀರ್ಥಬೆಟ್ಟುಗುತ್ತಿವಿನಿಂದ ಹೊರಟು- ಸಂಜೆ 4.30ಕ್ಕೆ ದೈವಸ್ಥಾನಕ್ಕೆ ಆಗಮನ.ಸಂಜೆ 6.00ಕ್ಕೆ ನೂತನ ಗೋಪುರದ ವಾಸ್ತು ಪೂಜೆ, ವಾಸ್ತು ಹೋಮ ಇತ್ಯಾದಿ.
12-04-2026ನೇ ಭಾನುವಾರ: ಬೆಳಿಗ್ಗೆ 8.00ಕ್ಕೆ ಚಂಡಿಕಾಯಾಗ ಪ್ರಾರಂಭ, ಗಂಟೆ 11.00ಕ್ಕೆ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಕಲಾಶಾಭಿಷೇಕ, ನಾಗಬ್ರಹ್ಮರಿಗೆ ಪೂಜೆ. ಮಧ್ಯಾಹ್ನ 11.30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ, 12.00ಕ್ಕೆ ಮಹಾಪೂಜೆ, 12.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ.
13-04-2026ನೇ ಸೋಮವಾರ: ಸಂಜೆ 6.00ಕ್ಕೆ ಧ್ವಜಾರೋಹಣ,
ಸಂಜೆ 7.00ಕ್ಕೆ ರಂಗಪೂಜೆ.14-04-2026ನೇ ಮಂಗಳವಾರ: ಬೆಳಿಗ್ಗೆ 11.00ಕ್ಕೆ ಕಲಾಶಾಭಿಷೇಕ, ದೈವಗಳಿಗೆ ನವಕ ಪ್ರಧಾನ ಕಲಾಶಾಭಿಷೇಕ, 11.30ಕ್ಕೆ ಅಶ್ವತ್ಥ ಕಟ್ಟೆಯಲ್ಲಿ ಕಟ್ಟೆ ಪೂಜೆ.
ಮಧ್ಯಾಹ್ನ ಗಂಟೆ 12.00ಕ್ಕೆ ನಂದಿಗೋಣ ನೇಮ ಪ್ರಾರಂಭ, ಮಧ್ಯಾಹ್ನ 1.00 ರಿಂದ ಮಹಾ ಅನ್ನಸಂತರ್ಪಣೆ.
ರಾತ್ರಿ 8.30ಕ್ಕೆ ಮಹಾಪೂಜೆ,.jpg)
ಶ್ರೀ ರಕ್ತೇಶ್ವರಿ ಹಾಗೂ ವ್ಯಾಘ್ರಚಾಮುಂಡಿ ದೈವಗಳ ನೇಮೋತ್ಸವ
ರಾತ್ರಿ 9.00ಕ್ಕೆ ಶ್ರೀ ರಕ್ತೇಶ್ವರಿ ಹಾಗೂ ವ್ಯಾಘ್ರಚಾಮುಂಡಿ ದೈವಗಳ ನೇಮೋತ್ಸವ ಪ್ರಾರಂಭ.15-04-2026ನೇ ಬುಧವಾರ: ರಾತ್ರಿ 7.00 ರಿಂದ ರಂಗಪೂಜೆ.
16-04-2026ನೇ ಗುರುವಾರ: ಬೆಳಿಗ್ಗೆ 9.00ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಗಂಟೆ 12.00ಕ್ಕೆ ಮಹಾಪೂಜೆ, 12.30 ರಿಂದ ಅನ್ನಸಂತರ್ಪಣೆ.
17-04-2026ನೇ ಶುಕ್ರವಾರ: ರಾತ್ರಿ 7.00 ರಿಂದ ರಂಗಪೂಜೆ.
18-04-2026ನೇ ಶನಿವಾರ: ಬೆಳಿಗ್ಗೆ 11.00ಕ್ಕೆ ನವಕ ಪ್ರಧಾನ ಕಲಾಶಾಭಿಷೇಕ, 11.15ಕ್ಕೆ ಮಹಾಪೂಜೆ, ಬಲಿ, ಗಂಟೆ 12.05ಕ್ಕೆ ರಥಾರೋಹಣ. ಮಧ್ಯಾಹ್ನ 1.00 ರಿಂದ ಅನ್ನಸಂತರ್ಪಣೆ.

ಮಹಾ ರಥೋತ್ಸವ. ರಾತ್ರಿ 8.30ಕ್ಕೆ ಮಹಾ ರಥೋತ್ಸವ ನಡೆಯಲಿರುವುದು.
ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 7.00 ಗಂಟೆವರೆಗೆ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಇವರ ನೇತೃತ್ವದಲ್ಲಿ ವಿವಿಧ ಕುಣಿತ ಭಜನಾ ಮಂಡಳಿಗಳಿಂದ ಕುಣಿತ ಭಜನಾ ಕಾರ್ಯಕ್ರಮ ನೆರವೇರಲಿದೆ.
ರಾತ್ರಿ 10.00 ರಿಂದ ತುಳುವ ಸಿರಿ ಕಲಾವಿದರಿಂದ 'ಕೈತಲ್ ಪೋವೊಡ್ಚಿ'ಸಾಮಾಜಿಕ ನಾಟಕನಡೆಯಲಿರುವುದು.
.19-04-2026ನೇ ಭಾನುವಾರ: ಬೆಳಿಗ್ಗೆ 9.00ಕ್ಕೆ "ತುಲಾಭಾರ ಸೇವೆ", ರಾತ್ರಿ 7.00ಕ್ಕೆ ರಂಗಪೂಜೆ, ರಾತ್ರಿ 8.00ಕ್ಕೆ ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾವರೋಹಣ.
ಭಕ್ತಾಭಿಮಾನಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ತಾವೆಲ್ಲರೂ ಆಗಮಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ;-
ಕುಂಟಾಡಿ ಗ್ರಾಮಸ್ಥರು
ಆಡಳಿತ ಮೋಕ್ತೇಸರರು ಹಾಗೂ ಆಡಳಿತ ಮಂಡಳಿ, ಶ್ರೀ ರಕ್ತೇಶ್ವರಿ ದೈವಸ್ಥಾನ, ಕುಂಟಾಡಿ.

Post a Comment