ಟೋಲ್ ಪ್ಲಾಜಾ ಹಾದು ಹೋಗಲು ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ಆಯ್ಕೆ ನೀಡಲಾಗಿದೆ. ಆದರೆ, ಈ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಂದರೆ, ಯುಪಿಐ ವಹಿವಾಟು ನಡೆಸಿದಲ್ಲಿ ಸಾಮಾನ್ಯ ಟೋಲ್ ಶುಲ್ಕಕ್ಕಿಂತ ಶೇ.25 ರಷ್ಟು ಹೆಚ್ಚುವರಿ ಹಣವನ್ನ ಚಾಲಕರು ಪಾವತಿ ಮಾಡಬೇಕಾಗುತ್ತದೆ.
ಒಂದು ವೇಳೆ ಚಾಲಕರು ಫಾಸ್ಟ್ಟ್ಯಾಗ್ ಮತ್ತು ಯುಪಿಐ ಇವೆರಡರ ಮೂಲಕ ಪಾವತಿಸಲು ನಿರಾಕರಿಸಿದರೆ ರಾಷ್ಟ್ರೀಯ ಹೆದ್ದಾರಿ ನಿಯಮಗಳಡಿ ವಾಹನ ಪ್ರವೇಶವನ್ನ ನಿರಾಕರಿಸಬಹುದು. ಅಥವಾ ಇ-ನೋಟಿಸ್ ನೀಡಬಹುದು. 3 ದಿನಗಳ ಒಳಗೆ ದಂಡದ ಮೊತ್ತ ಪಾವತಿಸದೇ ಇದ್ದರೆ ದಂಡದ ಮೊತ್ತ ದುಪ್ಪಟ್ಟಾಗಬಹುದು ಎಂದು ಸೂಚಿಸಲಾಗಿದೆ.
ಟೋಲ್ ಬೂತ್ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಎಲ್ಲಾ ಟೋಲ್ ಗಳನ್ನ ಡಿಜಿಟಲೀಕರಣಗೊಳಿಸುವ ನಿರ್ಧಾರಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
Post a Comment