".

Header Ads

ಅಟೋ ರಿಕ್ಷಾ ಗಳ ಗ್ಯಾಸ್ ದರ ಹೆಚ್ಚಳ ಸರಕಾರದ ಮಧ್ಯಪ್ರವೇಶಕ್ಕೆ- ಸಿಐಟಿಯು ಆಗ್ರಹ..!

 


ಆಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ಹೆಸರಿನಲ್ಲಿ ಅಡುಗೆ ಅನಿಲ ಮತ್ತು,ಅಟೋ ಗ್ಯಾಸ್ ದರ ಹೆಚ್ಚಳ ಮಾಡಿ ಖಾಸಗಿ ಅನಿಲ ಕಂಪನಿಗಳು ರಿಕ್ಷಾ ಚಾಲಕರನ್ನು ಹಾಗೂ ಸಾರ್ವಜನಿಕ ರನ್ನು ಲೂಟಿ ಮಾಡುತ್ತಿರುವುದು ಸಿಐಟಿಯು ಉಡುಪಿ ವಲಯ ಸಮಿತಿ ಖಂಡಿಸುತ್ತದೆ.

ಎಪ್ರಿಲ್ 1ರಿಂದ ಅಟೋ ರಿಕ್ಷಾ ಗ್ಯಾಸ್ ದರ CNG ಕಂಪನಿಯ ವರು 2ರೂ ಮತ್ತು LPG ಕಂಪನಿಯವರು 30 ಹೆಚ್ಚಳಮಾಡಿ ರಿಕ್ಷಾ ಚಾಲಕರಿಂದ ಹಗಲು ದರೋಡೆ ಮಾಡುತ್ತಿದೆ.ಇದರಿಂದಾಗಿ ಅನಿವಾರ್ಯ ವಾಗಿ ರಿಕ್ಷಾ ದರ ಹೆಚ್ಚಳ ಮಾಡುವ ಸಾಧ್ಯತೆಗಳು ಇವೆ.ಇದರಿಂದ ಸಾರ್ವಜನಿಕರಿಗೆ ,ಕೂಲಿ ಕಾರ್ಮಿಕರಿಗೆ ದೊಡ್ಡ ಹೊರೆ ಬಿಳಲಿದೆ.ಈಗಾಗಲೇ ಯುದ್ಧದ ಭೀತಿಯಿಂದ ಎಲ್ಲಾ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಯಾಗಿದ್ದು ಅಡುಗೆ ಅನಿಲ ದರ 60 ಹೆಚ್ಚಳವಾಗಿದ್ದು ಜನಸಾಮಾನ್ಯರು ತತ್ತಾರಿಸಿ ಹೊಗಿದ್ದಾರೆ.ಆದ್ದರಿಂದ ಸರಕಾರ,ಜಿಲ್ಲಾಡಳಿತ ಕೂಡಲೇ ಮಧ್ಯಪ್ರದೇಶಿಸಿ ಖಾಸಗಿ ಅನಿಲ ಕಂಪನಿಗಳಿಗೆ ಅನಿಲ ದರ ಹೆಚ್ಚಳ ಮಾಡದ ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಹಾಗೂ ಸಮರ್ಪಕವಾಗಿ ಅನಿಲ ವಿತರಣೆ ಮಾಡಬೇಕು. ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕಾರಾದ ಕವಿರಾಜ್. ಎಸ್.ಕಾಂಚನ್ ಒತ್ತಾಯಿಸಿದ್ದಾರೆ.

Powered by Blogger.