".

Header Ads

ಮಂಗಳೂರು ಜಂಕ್ಷನ್ – ಮುಂಬೈ ಸಿಎಸ್‌ಎಂಟಿ ರೈಲು ಸಂಚಾರದಲ್ಲಿ ಮೊಟಕು

 


ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‌ಎಂಟಿ ಎಕ್ಸ್‌ ಪ್ರೆಸ್ ರೈಲು ಜೂನ್ 12 ರವರೆಗೆ ಥಾಣೆ ನಿಲ್ದಾಣ ತನಕ ಮಾತ್ರ ಸಂಚರಿಸಲಿದೆ. ಮುಂಬಯಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿ ಪ್ಲಾಟ್‌ಫಾರಂ ವಿಸ್ತರಣಾ ಕಾಮಗಾರಿ ಇನ್ನೂ 25 ದಿನಗಳ ಕಾಲ ಮುಂದುವರಿಯಲಿರುವುದರಿಂದ ಈ ಸಂಚಾರ ಮೊಟಕು  ಮಾಡಲಾಗಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ.ಹಾಗೆಯೇ ಮಡಗಾಂವ್ ಜಂಕ್ಷನ್ – ಮುಂಬೈ ಸಿಎಸ್‌ಎಂಟಿ ನಡುವೆ ಸಂಚರಿಸುವ ತೇಜಸ್ ರೈಲಿನ ಸಂಚಾರವನ್ನು ಮೇ 27 ರಿಂದ ಜೂನ್ 12 ರವರೆಗೆ ದಾದರ್ ನಿಲ್ದಾಣದಲ್ಲೇ ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ.

Powered by Blogger.