ಮಧ್ಯ ಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ; ಕುವೈತ್’ನ ಅಮೆರಿಕನ್ ನೆಲೆಗಳ ಮೇಲೆ ಇರಾನ್ ದಾಳಿ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ದೇಶದ ವಿವಿಧ ಕಡೆಗಳಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಸರ್ಕಾರಿ ಸ್ವಾಮ್ಯದ ಪ್ರಸಾರ ಸಂಸ್ಥೆ ಐಆರ್ ಐಬಿ ಪ್ರತ್ಯೇಕ ಹೇಳಿಕೆ ನೀಡಿ, ಕುವೈತ್ ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿ ಮಾಡಿ ಇರಾನ್ ದಾಳಿ ನಡೆಸಿದೆ ಎಂದು ಹೇಳಿದೆ.
ಪರ್ಶಿಯನ್ ಕೊಲ್ಲಿ, ಹಾರ್ಮುಝ್ ಜಲಸಂಧಿ ಮತ್ತು ಕ್ವೆಶ್ಮ್ ದ್ವೀಪದಲ್ಲಿ ಅಮೆರಿಕದ ದ್ವೇಷದ ಕ್ರಮಗಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ. ಶತ್ರುದೇಶಗಳ ವೈಮಾನಿಕ ಗುರಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ವಾಯುರಕ್ಷಣಾ ಘಟಕಗಳು ನಡೆಸಿದ ಕಾರ್ಯಾಚರಣೆಗಳ ಕಾರಣದಿಂದ ನಿವಾಸಿಗಳಿಗೆ ದೊಡ್ಡ ಶಬ್ದಗಳು ಕೇಳಿಬಂದಿವೆ ಎಂದು ಕುವೈತ್ ಸೇನೆಯ ಸಿಬ್ಬಂದಿ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.
ಕುವೈತ್ ನ ವಾಯುರಕ್ಷಣಾ ವ್ಯವಸ್ಥೆ ಪ್ರಸ್ತುತ ವಿರೋಧಿ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳನ್ನು ಎದುರಿಸುತ್ತಿವೆ. ದೊಡ್ಡ ಸದ್ದುಗಳು ಕೇಳಿಬಂದರೆ ಅದು ವಾಯುರಕ್ಷಣಾ ವ್ಯವಸ್ಥೆಗಳು ವಿರೋಧಿ ದಾಳಿಗಳನ್ನು ಛೇದಿಸುವ ಕಾರ್ಯಾಚರಣೆಗೆ ಸಂಬಂಧಪಟ್ಟದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಯಾವುದೇ ಅವಶೇಷಗಳು, ಗುಂಡಿನ ಚೂರು ಅಥವಾ ಅಪರಿಚಿತ ಸಾಧನಗಳ ಬಳಿಗೆ ತೆರಳದಂತೆ ಸಾರ್ವಜನಿಕರಿಗೆ ಸೇನೆ ಎಚ್ಚರಿಕೆ ನೀಡಿದ್ದು, ಇದು ಡ್ರೋನ್ ಹಾಗೂ ಕ್ಷಿಪಣಿಗಳ ಛೇದನದ ಸಂದರ್ಭ ಬಿದ್ದಿರುವ ಸಾಧ್ಯತೆ ಇದೆ. ಇಂಥ ಸಾಧನಗಳು ಅಪಾಯಕಾರಿ ಎಂದು ಎಚ್ಚರಿಸಿದೆ. ಭದ್ರತಾ ಮತ್ತು ಸುರಕ್ಷತಾ

Post a Comment