".

Header Ads

ಯುವಕರನ್ನು ವಂಚಿಸಿ ಕೋಟಿ ಕೋಟಿ ರೂ ದೋಖಾ; ಖತರ್ನಾಕ್ ಅಪ್ಪ, ಮಗಳ ಬಂಧನ


 ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ಕೋಟ್ಯಾಂತರ ರೂ. ಹಣ ಪೀಕುತ್ತಿದ್ದ ಅಪ್ಪ ಮತ್ತು ಮಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಶಂಶಾದ್ ಬೇಗಂ ಹಾಗೂ ಆಕೆಯ ತಂದೆ ಮನ್ಸೂರ್ ಅಹಮದ್ ಬಂಧಿತ ಆರೋಪಿಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ಬರೋಬ್ಬರಿ 5 ಕೋಟಿ 30 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಹಣ ಪಡೆದು ನಂಬಿಕೆ ಹುಟ್ಟಿಸಲು ಇವರು ನಕಲಿ ತರಬೇತಿ ಕೇಂದ್ರಗಳನ್ನು ಸೃಷ್ಟಿಸಿದ್ದರು. ತರಬೇತಿ ಮುಗಿದ ನಂತರ ಅಧಿಕೃತವಾಗಿ ಕಾಣುವ ನಕಲಿ ನೇಮಕಾತಿ ಪತ್ರಗಳನ್ನು ನೀಡಿ ವಂಚಿಸುತ್ತಿದ್ದರು. ನೇಮಕಾತಿ ಪತ್ರ ಪಡೆದು ಕೆಲಸಕ್ಕೆ ಹೋದಾಗ ಅದು ನಕಲಿ ಎಂಬುವುದು ಗೊತ್ತಾಗಿದೆ.ಸಂತ್ರಸ್ತ ಯುವಕರು ನಿಡಿದ ದೂರಿನ ಆಧಾರದಲ್ಲಿ ತಂದೆ ಮಗಳನ್ನು ಬಂಧಿಸಲಾಗಿದೆ. ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

Powered by Blogger.