ಬಾಂಬೆ ಬಂಟ್ಸ್ ಅಸೋಸಿಯೇಷನ್‌ನ ಮಹಿಳಾ ವಿಭಾಗ | ಅಕ್ಟೋಬರ್ 2 ರಂದು ನವರಾತ್ರಿ ಉತ್ಸವ ಹಳದಿ ಕುಂಕುಮ ಡಿಜೆ ದಾಂಡಿಯಾ
ಮುಂಬಯಿ : ಬಾಂಬೆ ಬಂಟ್ಸ್ ಅಸೋಸಿಯೇಷನ್‌ನ ಮಹಿಳಾ ವಿಭಾಗ ಆಶ್ರಯದಲ್ಲಿ ಅಕ್ಟೋಬರ್ 2 ರಂದು ನವರಾತ್ರಿ ಉತ್ಸವ. ಹಳದಿ ಕುಂಕುಮ. ಡಿಜೆ ದಾಂಡಿಯಾ , ಬಂಟ್ಸ್ ಸೆಂಟರ್, ಬಂಟ್ಸ್ ಸೆಂಟರ್ ಮಾರ್ಗ, ಪ್ಲಾಟ್ ಕ್ರಮಾಂಕ 42, ಸೆಕ್ಟರ್ 24, ಜೂಹೀನಗರ ಪಶ್ಚಿಮ ರೈಲು ನಿಲ್ಧಾಣದ ಹತ್ತಿರ ನವಿ ಮುಂಬಯಿ ಇಲ್ಲಿ ಮಧ್ಯಾಹ್ನ 3.00. ರಿಂದ ರಾತ್ರಿ 8 ರ ತನಕ ನಡೆಯಲಿದೆ
ಬಾಂಬೆ ಬಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಮುರಳಿ ಕೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಗೋಪಾಲ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ. ಬಂಡ್ಸ್ ನ್ಯಾಯಮಂಡಳಿಯ ಅಧ್ಯಕ್ಷ ಪ್ರಸಿದ್ಧ ನ್ಯಾಯವಾದಿ ಕದಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮವನ್ನು ನವಿ ಮುಂಬೈಯ ಸಿಬಿಡಿ ಯ ಕಾರ್ಪೊರೇಟ್ ಹೋಟೆಲ್ ಸದಾಶಿವ ಶೆಟ್ಟಿಯ ಅವರ ಮಗಳು ಹೋಟೆಲ್ ನಿರ್ದೇಶಕಿ ಮನಿಷಾ ನಿಸಾನ್ ರೈ ಉದ್ಘಾಟಿಸಲಿದ್ದಾರೆ
ಮಧ್ಯಾಹ್ನ 3.00 ನಂತರ ನವರಾತ್ರಿ ಉತ್ಸವದ ಆಚರಣೆಯ ಪ್ರಯುಕ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನೆ. ಹಳದಿ ಕುಂಕುಮ.ಡಿಜೆ ದಾಂಡಿಯಾ ನಡೆಯಲಿದೆ
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಮಹಿಳೆಯರು ಪಾಲ್ಗೊಳ್ಳಬೇಕಾಗಿ, ಅಸೋಸಿಯೇಷನ್‌ನ ಉಪಾಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಕಾರ್ಯದರ್ಶಿ ಸುನೀಲ್ ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶಂಕರ್ ಎ.ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ಯಾಮಸುಂದರ್ ಎಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಲತಾ ಜಿ ಶೆಟ್ಟಿ,ಉಪಾಧ್ಯಕ್ಷೆ ಲತಾ ಆರ್. ಶೆಟ್ಟಿ, .ಕಾರ್ಯದರ್ಶಿ ತೇಜಾಕ್ಷಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಉಷಾ ಆರ್. ಶೆಟ್ಟಿ, ಕೋಶಧಿಕಾರಿ ಶಾಂತ ಎನ್. ಶೆಟ್ಟಿ- , ಜೊತೆ ಕೋಶಧಿಕಾರಿ ಲಲಿತಾ ಬಿ. ಶೆಟ್ಟಿ- ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ್ ರೈ, ವಿನಂತಿಸಿಕೊಂಡಿದ್ದಾರೆ.
-------------------------------------------------
DJ ದಾಂಡಿಯಾ ಪಾಲ್ಗೊಂಡ ಅವರಿಗೆ ಬಹುಮಾನಗಳನ್ನು ಹೊಂದಿದ್ದೇವೆ ಎಂಬುದನ್ನು ದಯವಿಟ್ಟು ಗಮನಿಸಿ
*ಅತ್ಯುತ್ತಮ ಉಡುಗೆ- 1
*ಅತ್ಯುತ್ತಮ ನೃತ್ಯಗಾರರು- 3 ಬಹುಮಾನಗಳು
ಅತ್ಯುತ್ತಮ ಪರಿಕರಗಳು- 1 ಬಹುಮಾನ
*ಡ್ರೆಸ್ ಕೋಡ್ - ಮೇಲಾಗಿ ಯಾವುದೇ ಕಿತ್ತಳೆ ಬಣ್ಣದ ಸಾಂಪ್ರದಾಯಿಕ ಉಡುಗೆ ಅಥವಾ ಬಂಧನಿ / ಲೆಹ್ರಿಯಾ ಪ್ರಿಂಟ್ ಔಟ್‌ಫಿಟ್.

Post a Comment