ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟ : ಕಾರ್ಕಳದ ಲೇಡೀಸ್ ಫಿಟ್ನೆಸ್ ಹೌಸ್ ಗೆ ಚಿನ್ನ
ಕಾರ್ಕಳ : ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಲೇಡೀಸ್ ಫಿಟ್ನೆಸ್ ಹೌಸ್ ಜೋಡುರಸ್ತೆ ತಂಡವು ಒಂದು ಚಿನ್ನ ಸಹಿತ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದೆ.
ದಿನಾಂಕ ಸೆಪ್ಟೆಂಬರ್ 29 ರಂದು ನಡೆದ ಈ ಕುಸ್ತಿ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದ ಹಲವು ತಂಡಗಳಲ್ಲಿ ರೆಫ್ರಿ ಮೊಹಮ್ಮದ್ ಅಲಿ ನೇತೃತ್ವದ ಲೇಡೀಸ್ ಫಿಟ್ನೆಸ್ ತಂಡಕ್ಕೆ ಒಂದು ಚಿನ್ನ ಸಹಿತ ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಒಲಿದಿದೆ.
ಇವರ ಈ ಸಾಧನೆಗೆ ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಯೋಗೇಶ್ ಸಾಲ್ಯಾನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.



Post a Comment