".

Header Ads

ಶ್ರೀ ಜಗದಂಬ ಮಂದಿರ ಡೊಂಬಿವಲಿ ಯಲ್ಲಿ ಎಂಟನೇ ವರ್ಷದ ಶರನ್ನವರಾತ್ರಿ ಮಹೋತ್ಸವ

 


ಮಹಾರಾಷ್ಟ್ರದ ಮಿನಿ ತುಳುನಾಡು ಎಂದೇ ಖ್ಯಾತವಾಗಿರುವ ಡೊಂಬಿವಲಿಯ ಗೋಪಿನಾಥ್ ಚೌಕ್ ಬಳಿಯ ಯಕ್ಷಕಲಾ ಸಂಸ್ಥೆ ಸಂಚಾಲಕತ್ವದ ಶ್ರೀ ಜಗದಂಬ ಮಂದಿರ ಡೊಂಬಿವಲಿ ಇಲ್ಲಿ ಎಂಟನೇ ವರ್ಷದ ಶ್ರೀ ಶರನ್ನವರಾತ್ರಿ  ಮಹೋತ್ಸವ ಸಪ್ಟೆಂಬರ್ 26 ರಿಂದ ಆರಂಭಗೊಂಡಿದ್ದು ಭಕ್ತಿ ಶ್ರದ್ಧೆ ಯೊಂದಿಗೆ ವೈಭವವಾಗಿ  ಅಕ್ಟೋಬರ್ 5 ರವರೆಗೆ ಜರುಗಲಿದೆ.



ಶ್ರೀ ಕ್ಷೇತ್ರದ ತಂತ್ರಿಗಳಾದ ಶ್ರೀ ಶಂಕರ್ ನಾರಾಯಣ ತಂತ್ರಿ ಅವರ ಆಶೀರ್ವಾದದೊಂದಿಗೆ ಹಾಗೂ ಪ್ರಧಾನ ಅರ್ಚಕರಾದ ಶ್ರೀ ರಘುಪತಿ ಭಟ್ ಅವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿರುವವು.




 ಈ ಸಂದರ್ಭದಲ್ಲಿ ದಿನ ಮಧ್ಯಾಹ್ನ 12:00 ಗಂಟೆಗೆ ಹಾಗೂ ಸಾಯಂಕಾಲ 8 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ ಹಾಗೂ ದಿನ ಮಧ್ಯಾಹ್ನ ಹಾಗೂ ಸಾಯಂಕಾಲ ಅನ್ನ ಸಂತರ್ಪಣೆ ಜರುಗಲಿದೆ.

ಸಪ್ಟೆಂಬರ್ 26ರ ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ತೋರಣ ಮಹೂರ್ತ ನಡೆಯಿತು. ಸೆಪ್ಟೆಂಬರ್ 27ರಂದು ಮಂಗಳವಾರ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ ಹಾಗೂ ರಂಗಪೂಜೆ ನಡೆಯಿತು. ಸಪ್ಟೆಂಬರ್ 28ರ ಬುಧವಾರ ಸಾಯಂಕಾಲ ಶ್ರೀ ಜಗದಂಬ ಮಹಿಳಾ ವಿಭಾಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೆಪ್ಟೆಂಬರ್ 29ರ ಗುರುವಾರ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಸೆಪ್ಟೆಂಬರ್ 30 ರ ಶುಕ್ರವಾರ ಸಾಯಂಕಾಲ 5:00ಗೆ ರಂಗ ಪೂಜೆ ನಡೆಯಲಿದೆ.  ರಾತ್ರಿ 9:00ಕ್ಕೆ ಡಾ ದಾಕ್ಷಾಯಿಣಿ ಎಡಹಳ್ಳಿ ರಚನೆಯ ರವಿ ಎಸ್ ಶೆಟ್ಟಿ ನಿರ್ದೇಶನದ "ಗೊಂಬೆಗಳು" ನಾಟಕ ನಡೆಯಲಿದೆ. ಅಕ್ಟೋಬರ್ 1 ರಂದು ಶನಿವಾರ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ  ನಡೆಯಲಿದೆ ಸಾಯಂಕಾಲ 6 ರಿಂದ ಶ್ರೀ ಜಗದಂಬ ಯುವ ವಿಭಾಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ  ನಡೆಯಲಿದೆ. ಸಾಯಂಕಾಲ 6:30ಕ್ಕೆ ಮೊಕ್ಯೆದ  ಹವ್ಯಾಸಿ ಕಲಾವಿದರು ಜುನ್ನ ಡೊಂಬಿವಲಿ ಅಜೆಕಾರು ಜಯ ಶೆಟ್ಟಿ ನಿರ್ದೇಶನದ "ಮೂಡನಂಬಿಕೆ" ಕಿರು ಸಾಮಾಜಿಕ ನಾಟಕ ನಡೆಯಲಿದೆ. ಅಕ್ಟೋಬರ್ 2 ರ ರವಿವಾರ ಬೆಳಿಗ್ಗೆ ಚಂಡಿಕಾ ಹೋಮ ನಡೆಯಲಿದೆ. ಸಾಯಂಕಾಲ 5:00 ಭ್ರಾಮರಿ ಕಲಾತಂಡ  ಮಂಗಳೂರು, ಮುಂಬಯಿಯ ಸತೀಶ್ ರವರಿಂದ ಭಕ್ತಿರಸಮಂಜರಿ ನಡೆಯಲಿದೆ. ಅಕ್ಟೋಬರ್ 3 ರ ಸೋಮವಾರ ಬೆಳಿಗ್ಗೆ ಲಲಿತನಾಮಾರ್ಚನೆ ಪೂಜೆ ನಡೆಯಲಿದೆ. ಅಕ್ಟೋಬರ್ 4 ರ ಮಂಗಳವಾರ ಬೆಳಿಗ್ಗೆ ದುರ್ಗಾ ಹೋಮ, ಸಾಯಂಕಾಲ ಬಲಿ ಉತ್ಸವ, ಪಲ್ಲಕ್ಕಿ ಬಲಿ ಉತ್ಸವ ನಡೆದು ರಾತ್ರಿ 10 ಕ್ಕೆ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ ಮುಂಬೈ ಹಾಗೂ ಊರಿನ ಅತಿಥಿ ಕಲಾವಿದರಿಂದ "ಶ್ರೀದೇವಿ ಮಹಾತ್ಮೆ" ಯಕ್ಷಗಾನ ನಡೆಯಲಿದೆ. ಈ ಯಕ್ಷಗಾನದ ಮಧ್ಯಾಂತರದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಗರದ ಪ್ರಸಿದ್ಧ ಭಜನ ಗಾಯಕ, ಶನಿಗ್ರಂಥ ಪಾರಾಯಣದ ಅರ್ಥದಾರಿ, ಮುಂಬೈ ಯಕ್ಷರಂಗದ ಬಹುಮುಖ ಪ್ರತಿಭೆ ತೆಂಕ ಎರ್ಮಲ್   ನಾಗೇಶ್ ಸುವರ್ಣರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.





 ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನೆ ನಡೆಯುತ್ತಿದೆ.

ಎಲ್ಲಾ ಭಕ್ತಾಭಿಮಾನಿಗಳು ಎಲ್ಲಾ ತರದ ಸೇವೆಯಲ್ಲಿ ಪಾಲ್ಗೊಂಡು ತನು ಮನದನಗಳಿಂದ ಸಹಕರಿಸಿ ಶ್ರೀ ಜಗದಂಬೆಯ ಶರಣುವ ರಾತ್ರಿಯ ಮಹೋತ್ಸವವನ್ನು ಚಂದಗಾಣಿಸಿ ಕೊಡಬೇಕಾಗಿ ಗೌರವ ಅಧ್ಯಕ್ಷ ಹರೀಶ್ ಡಿ ಶೆಟ್ಟಿ, ಅಧ್ಯಕ್ಷ ದಿವಾಕರ್ ಜಿ ರೈ, ಉಪಾಧ್ಯಕ್ಷರುಗಳಾದ ರವೀಂದ್ರ ವೈ ಶೆಟ್ಟಿ,  ಸುರೇಶ್ ಶೆಟ್ಟಿ ಶೃಂಗೇರಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿ ಕೋಟ್ಯಾನ್,  ಕೋಶಾಧಿಕಾರಿ ರವಿ ಶೆಟ್ಟಿ, ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ, ಜೊತೆ ಕೋಶಾಧಿಕಾರಿ ಸಂತೋಷ್ ಎಂ ಶೆಟ್ಟಿ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ  ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು, ಶನಿ ಪೂಜಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸದಸ್ಯರು   ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ




Powered by Blogger.