ಮುಂಬಯಿ ಪರಿಸರದಲ್ಲಿ ಮಿನಿ ತುಳುನಾಡು ಎಂದೇ ಪ್ರಸಿದ್ಧಿ ಪಡೆದಿರುವ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 58 ನೇ ವರ್ಷದ ನವರಾತ್ರಿ ಮಹೋತ್ಸವ
ಮುಂಬಯಿ ಪರಿಸರದಲ್ಲಿ ಮಿನಿ ತುಳುನಾಡು ಎಂದೇ ಪ್ರಸಿದ್ಧಿ ಪಡೆದಿರುವ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 58 ನೇ ವರ್ಷದ ನವರಾತ್ರಿ ಮಹೋತ್ಸವವು ಸೆಪ್ಟೆಂಬರ್ 26 ರ ಸೋಮವಾರ ದಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್ 25 ರ ಸಂಜೆ ಶ್ರೀ ದೇವಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮೂಲಕ ಬ್ರಾಹ್ಮಣ ಸಭಾ ದಿಂದ ತರಲಾಯಿತು.
- ಈ ಬಾರಿಯ ಮೂರ್ತಿ ಸೇವೆ ಭಿವಂಡಿಯ ಕಾರ್ಪೊರೇಟರ್ ಸಂತೋಷ್ ಶೆಟ್ಟಿ ಅವರಿಂದ ನಡೆಯಿತು.
- ಸೆಪ್ಟೆಂಬರ್ 26 ರಂದು ಬೆಳಿಗ್ಗೆ ಗಣಹೋಮ ನಡೆಯಿತು.
- ಈ ಸಂದರ್ಭದಲ್ಲಿ ಶ್ರೀ ದೇವಿಗೆ ಶಾಶ್ವತ ಮಂಟಪವನ್ನು ಸಮರ್ಪಿಸಲಾಯಿತು.
- ಮಂಟಪವನ್ನು ನಗರದ ಖ್ಯಾತ ಮಂಟಪಕಾರ ಶ್ರೀ ಕಟ್ಟಿಲೇಶ್ವರಿ ಮಂಟಪ ವರ್ಕ್ ನ ಸುರೇಶ್ ಪೂಜಾರಿ ನಿರ್ಮಿಸಿದರು.
- ಶ್ರೀ ದೇವಿಗೆ ಆಭರಣ ತೊಡಿಸಿ, ಉಗ್ರಾಣ ಪೂಜೆ ನಡೆಯಿತು.
- ಈ ನಡುವೆ ಮಂಡಳಿ ಯ ಸದಸ್ಯರಿಂದ ಭಜನೆ ನಡೆಯಿತು.
- ಮಹಾಪೂಜೆ, ಪಲ್ಲಪೂಜೆ ನಡೆದು, ತೀರ್ಥ ಪ್ರಸಾದ ಮಹಾಪ್ರಸಾದ ನೆರವೇರಿತು.
ನವರಾತ್ರಿಯ ಪ್ರಯುಕ್ತ ಒಕ್ಟೋಬರ್ 5 ರ ವರಗೆ ವಿವಿಧ ಪೂಜಾ ವಿಧಿಗಳು ನೆರವೇರಲಿದೆ, ಒಕ್ಟೋಬರ್ 4 ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ನುರಿತ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಮಧ್ಯಂತರದಲ್ಲಿ ನಗರದ ಪ್ರಸಿದ್ಧ ಭಜನ ಗಾಯಕ ಖ್ಯಾತ ಶನಿಕಥಾ ಅರ್ಥಧಾರಿ, ಯಾಕ್ಷರಂಗ ದ ಬಹುಮುಖ ಪ್ರತಿಭಾ ಸಂಪನ್ನರಾದ ತೆಂಕ ಎರ್ಮಾಳು ನಾಗೇಶ್ ಎಸ್ ಸುವರ್ಣ ಹಾಗೂ ಘಟಕೋಪರ್ ಅಸಲ್ಪ ದ ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದ ರಾದ ಕೆಮ್ರಾಲ್ ನಾಗಪ್ಪ ಶ್ಯಾಮ ಶೆಟ್ಟಿ ಯವರಿಗೆ ನವರಾತ್ರೋತ್ಸವ ಮಂಡಳಿಯ ಸಂಸ್ಥಾಪಕ ರಾದ ಇನ್ನ ಬಾಳಿಕೆ ದಾಸು ಬಾಬು ಶೆಟ್ಟಿ ಯವರ ಸಂಸ್ಮರಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದು.
ಅಕ್ಟೋಬರ್ 5 ರ ಸಂಜೆ ವಿವಿಧ ವೇಷ ಭೂಷಣ ದೊಂದಿಗೆ ವೈಭವಯುತವಾಗಿ ವಿಸರ್ಜನ ಮೆರವಣಿಗೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮ ಗಳಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಂಡು, ತನು ಮನ ಧನ ದಿಂದ ಸಹಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಲಾಸಿನಿ ಶೆಟ್ಟಿ, ಹಾಗೂ ಎಲ್ಲ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

.jpeg)


.jpeg)

.jpeg)
Post a Comment