ಧರ್ಮಸ್ಥಳ ದಲ್ಲಿ ನಡೆದ ಭಜನ ತರಬೇತಿ ಕಮ್ಮಟದಲ್ಲಿ ಭಾಗವಹಿಸಿದ ಮುಂಬಯಿ ಘಟಕ
ಶ್ರೀ ಕ್ಷೇತ್ರ ಧರ್ಮಸ್ಥಳ ದ ಭಜನ ತರಬೇತಿ ಕಮ್ಮಟದಲ್ಲಿ ಮುಂಬಯಿ ಭಜನ ಪರಿಷತ್ ನಿಂದ ಶ್ರೀ ಮಂಜುನಾಥೇಶ್ವರ ದೇವರ ಆಶೀರ್ವಾದದ ಕರೆಯಿಂದ, ಶ್ರೀ ಅಣ್ಣಪ್ಪ ಸ್ವಾಮಿಯ ಅಪ್ಪಣೆಯಿಂದ ಶ್ರೀ ಕಾವಂದರ ಹಾಗೂ ಹೇಮಾವತಿ ಅಮ್ಮನವರ ಕೃಪೆಯಿಂದ ಹಾಗೂ ತರಬೇತಿ ಕಮ್ಮಟದ ಪದಾಧಿಕಾರಿಯಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಎಲ್ಲ ಪದಾಧಿಕಾರಿಗಳ ಪ್ರೀತಿಯಿಂದ ಮುಂಬಯಿ ಪರಿಷತ್ತಿನ ಕೇಂದ್ರ ಕಾರ್ಯಾಲಯ ಹಾಗೂ 5 ವಿಭಾಗದ ಪದಾಧಿಕಾರಿಗಳ ಸಹಕಾರದಿಂದ ಈ ಕಮ್ಮಟದಲ್ಲಿ ಸಹಬಾಗಿಗಳಾಗಿ ಶ್ರೀ ದೇವರ ಭಕ್ತಿಯ ಪ್ರಸಾದವನ್ನು ಮತ್ತು ನಮ್ಮ ದೇಹಕ್ಕೆ ಹಾಗೂ ಜೀವನಕ್ಕೆ ಬೇಕಾಗುವ ವಿಧವಿಧದ ಅಮೂಲ್ಯವಾದ ಚಿಂತನ ಮಂಥನದ ಅನುಭವದ ಮಾತನ್ನು ವಿಶೇಷ ಪರಿಣಿತರಿಂದ ಪಡೆದಿರುತ್ತೇವೆ. ಅದನ್ನು ನಮ್ಮ ಐದು ವಿಭಾಗದ ಎಲ್ಲಾ ಸದಸ್ಯರಿಗೆ, ಭಕ್ತರಿಗೆ ಹಂಚಿಕೊಳ್ಳುವ. ಎಂದು ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ನ ಮುಂಬಯಿ ಘಟಕದ ಅಧ್ಯಕ್ಷ ಧರ್ಮದರ್ಶಿ ದೇವು ಪೂಜಾರಿ ಹಾಗೂ ಕಾರ್ಯದರ್ಶಿ ರವೀಂದ್ರ ಶಾಂತಿ ಸಹಕರಿಸಿದ ಹಾಗೂ ಪಾಲ್ಗೊಂಡ ಭಜಕರಿಗೆ ಪತ್ರಿಕಾ ಪ್ರಕಟಣೆಯಲ್ಲಿ ಧನ್ಯವಾದ ಅರ್ಪಿಸಿದರು.
ಮುಂಬಯಿ ವಿಭಾಗದಿಂದ ಈ ಪುಣ್ಯ ಕಮ್ಮಟದ ತರಬೇತಿಯಲ್ಲಿ ಶ್ರೀ ನಾಗೇಶ್ ಸುವರ್ಣ, ಚಂದ್ರಹಾಸ ರೈ ಪುತ್ತೂರು, ಪ್ರಫುಲ್ ಚಂದ್ರ ಶ್ರೇಯನ್, ಶುಭಾ ದೇವಾಡಿಗ, ಪುಷ್ಪ ಬಂಗೇರ, ಜಯಂತಿ ಬಂಗೇರ, ಸರೋಜಿನಿ ಪೂಜಾರಿ ಇವರು ಪಾಲ್ಗೊಂಡಿದ್ದರು.


Post a Comment