ಶ್ರೀ ರಕ್ತೇಶ್ವರಿ ದೈವಸ್ಥಾನ ಕುಂಟಾಡಿ : ನವರಾತ್ರಿ ಪ್ರಯುಕ್ತ ಚಂಡಿಕಾಯಾಗ ಹಾಗೂ ದುರ್ಗಾ ನಮಸ್ಕಾರ ಪೂಜೆ
ಕಲ್ಯಾ- ಕುಂಟಾಡಿ : ಪ್ರಸಿದ್ಧ ಕಾರಣೀಕ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಕುಂಟಾಡಿ ರಕ್ತೇಶ್ವರಿ ದೈವಸ್ತಾನದಲ್ಲಿ ನವರಾತ್ರಿ ಪ್ರಯುಕ್ತ ಇದೇ ಬರುವ ಅಕ್ಟೋಬರ್ 5ರ ಬುಧವಾರದಂದು "ಚಂಡಿಕಾ ಯಾಗ" ಹಾಗೂ "ಸಾರ್ವಜನಿಕ ದುರ್ಗಾ ನಮಸ್ಕಾರ" ನಡೆಯಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಚಂಡಿಕಾ ಯಾಗ ಪ್ರಾರಂಭವಾಗಲಿದ್ದು, 12 ಗಂಟೆಗೆ ಚಂಡಿಕಾ ಯಾಗದ ಪೂರ್ಣಹುತಿ, ಮಹಾಪೂಜೆ, ತದ ನಂತರ ಪ್ರಸಾದ ವಿತರಣೆ ನಡೆಯಲಿದೆ.
ಮದ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ.
ಹಾಗೆಯೇ ಸಾಯಂಕಾಲ 6 ಗಂಟೆಯಿಂದ 7 ರವರೆಗೆ ರಕ್ತೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ತದ ನಂತರ ಸಾರ್ವಜನಿಕ
ದುರ್ಗಾ ನಮಸ್ಕಾರ ಪೂಜೆ ಪ್ರಾರಂಭವಾಗಲಿದೆ.
ಬಳಿಕ 8 ಗಂಟೆಗೆ
ಮಹಾಪೂಜೆ ಹಾಗೂ ಪ್ರಸಾದ ವಿತರಣೆಯಾಗಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ
ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ರಕ್ತೇಶ್ವರಿ ದೇವಿಯ
ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.

Post a Comment