".

Header Ads

ದೀಪಾವಳಿಗೆ ವಿಮಾನ ಯಾನ ದರ 3 ಪಟ್ಟು ಹೆಚ್ಚಳ

ಹಬ್ಬಗಳು ಬಂತೆಂದರೆ ಹೂವಿನಿಂದ ಹಿಡಿದು ಪೂಜೆಗೆ ಬೇಕಾಗುವ ಇತರ ಸಾಮಗ್ರಿಗಳಿಗೆ ದುಪ್ಪಟ್ಟು ಬೆಲೆ ನಿಗದಿಯಾಗುವುದು ಸಹಜ. ಅಲ್ಲದೆ ಹಬ್ಬಗಳ ಸಂದರ್ಭದಲ್ಲಿ ತಮ್ಮ ತಮ್ಮ ಊರಿಗೆ ಹೋಗುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತದೆ. ಈ ಸಂದರ್ಭ ಪ್ರಯಾಣ ದರ ದುಪ್ಪಟ್ಟು ಅಥವಾ ಅದಕ್ಕಿಂತಲೂ ಅಧಿಕವಾಗುತ್ತದೆ. ಇದೀಗ ಅದಕ್ಕೆ ಪೂರಕವೆಂಬಂತೆ ದೇಶೀಯ ವಿಮಾನ ಪ್ರಯಾಣ ದರದಲ್ಲಿ ದುಪ್ಪಟ್ಟು ಅಲ್ಲ ಮೂರು ಪಟ್ಟು ದರ ನಿಗದಿಯಾಗಿದೆ. 

ಹೌದು... ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶೀಯ ವಿಮಾನ ಪ್ರಯಾಣ ದರವನ್ನು ಮೂರುಪಟ್ಟು ಅಧಿಕಗೊಳಿಸಲಾಗಿದೆ. ಪ್ರಸ್ತುತ ದೇಶೀಯ ವಿಮಾನ ಯಾನ ದರಕ್ಕಿಂತ ಸಿಂಗಾಪುರ, ದುಬೈ ಹಾಗೂ ಬ್ಯಾಂಕಾಕ್‌ನಂತಹ ವಿದೇಶಿ ಸ್ಥಳಗಳಿಗೆ ತೆರಳುವ ವಿಮಾನ ಪ್ರಯಾಣ ದರವೇ ಅಗ್ಗವಾಗಿದೆ. 

ದೇಶದ ಪ್ರಮುಖ ಪ್ರವಾಸಿ ಟಿಕೆಟ್‌ ಬುಕಿಂಗ್‌ ವೇದಿಕೆಯಾಗಿರುವ ಮೇಕ್‌ ಮೈ ಟ್ರಿಪ್‌ ಪ್ರಕಾರ, ದಿಲ್ಲಿಯಿಂದ ಪಟನಾಗೆ ಅಕ್ಟೋಬರ್‌ 22ರ ವಿಮಾನ ಪ್ರಯಾಣ ದರ 17,000 ರೂ. ತಲುಪಿದೆ. ಮುಂಬಯಿಂದ ಪಟನಾಗೆ 20,000 ರೂ. ವೆಚ್ಚ ತಗುಲಲಿದೆ.

ಇದೇ ವೇಳೆ ದಿಲ್ಲಿಯಿಂದ ಶಾರ್ಜಾಗೆ ಕೇವಲ 11 ಸಾವಿರ ರೂ. ಟೆಕೆಟ್‌ ಶುಲ್ಕವಿದೆ. ಇನ್ನು ದಿಲ್ಲಿಯಿಂದ ಬ್ಯಾಂಕಾಕ್‌ಗೆ ತೆರಳಲು 10,500 ರೂ. ವಿಮಾನ ಪ್ರಯಾಣದರ ನಿಗದಿಯಾಗಿದ್ದರೆ, ದಿಲ್ಲಿಯಿಂದ ಸಿಂಗಾಪುರಕ್ಕೆ 13,000 ರೂ. ಪಾವತಿಸಿದರೆ ಸಾಕು. ಆದರೆ, ಕೋಲ್ಕೊತಾದಿಂದ ಪಟನಾಗೆ ತೆರಳಲು ವಿಮಾನ ಪ್ರಯಾಣಿಕರು 10,500 ರೂ. ನೀಡಬೇಕಾಗುತ್ತದೆ.

Powered by Blogger.