ಉಡುಪಿ: ಲವ್ ಜೆಹಾದ್ಗೆ ಮಹಿಳಾ ತಂಡದ ನೆರವು: ಎನ್ಐಎ
ಪಿಎಫ್ಐಯ ವಿದ್ಯಾರ್ಥಿ ಸಂಘಟನೆಯಾಗಿದ್ದ ಸಿಎಫ್ಐ ಜತೆಗೆ ಕಾರ್ಯನಿರ್ವಹಿಸುತ್ತಿದ್ದ ಶಾಹೀನ್ ಗ್ಯಾಂಗ್ ಹಿಂದೂ ವಿದ್ಯಾರ್ಥಿನಿಯರನ್ನು ಮುಸ್ಲಿಂ ಯುವಕರಿಗೆ ಪರಿಚಯಿಸಿ ವಿದ್ಯಾರ್ಥಿನಿಯರು ಪ್ರೀತಿಯ ಬಲೆಗೆ ಬೀಳುವಂತೆ ಮಾಡುತ್ತಿತ್ತು. ಅನಂತರ ಲವ್ ಜೆಹಾದ್ಗೆ ಸಹಕರಿಸುತ್ತಿತ್ತು. ಶಾಹೀನ್ ಗ್ರೂಪ್ಗೆ ಕೂಡ ಪಿಎಫ್ಐನಿಂದ ತರಬೇತಿ ನೀಡಲಾಗುತ್ತಿತ್ತು. ಈ ಗುಂಪು ದ.ಕ., ಉಡುಪಿ, ಕೊಡಗು, ಶಿವಮೊಗ್ಗ ಮೊದಲಾದೆಡೆ ಹೆಚ್ಚು ಕ್ರಿಯಾಶೀಲವಾಗಿತ್ತು ಎಂದು ಮೂಲಗಳು ತಿಳಿಸಿವೆ.
ದುಷ್ಕೃತ್ಯಕ್ಕೆ ಸಂಚು ಡಿಜೆ ಹಳ್ಳಿ ಮಾದರಿಯಲ್ಲಿ ಆರೋಪದಲ್ಲಿ ದ.ಕ. ಜಿಲ್ಲೆಯ ವಿವಿಧೆಡೆ ಎನ್ಐಎ ಜತೆ ದಾಳಿ ನಡೆಸಿದ್ದ ಬೆಂಗಳೂರು ಪೊಲೀಸರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮತ್ತು ಎಸ್ಪಿ ಕಚೇರಿಗೆ ಆಗಮಿಸಿ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆ ನಡೆಸಿದ್ದಾರೆ.

Post a Comment