".

Header Ads

ಶಾಕಿಂಗ್‌ ಸುದ್ದಿ: -ಶಾಲೆಯಲ್ಲಿ ಕುಕ್ಕರ್‌ ಸಿಡಿದು 4ನೇ ತರಗತಿಯ ಶಾಲಾ ಬಾಲಕಿ ಗಂಭೀರ !

 


ಸುದ್ದಿ: -  ಕುಕ್ಕರ್‌ ಸಿಡಿದು 4ನೇ ತರಗತಿಯ ಶಾಲಾ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಮಗಳೂರುನಲ್ಲಿ ನೆಡೆದಿದೆ.

 ಬ್ಯಾರವಳ್ಳಿ ಗ್ರಾಮದ ಶಾಲಾ ಬಾಲಕಿ ಮಾಕೋಡು ಗ್ರಾಮದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.   ಮಧ್ಯಾಹ್ನ ಶಾಲೆಯ ಆಡುಗೆ ಸಿಬ್ಬಂದಿ ಕುಕ್ಕರ್‌ ನಲ್ಲಿ ಅಡುಗೆ ಮಾಡಿ ಇಟ್ಟಿದ್ದರು. 

ಶಾಲಾ ಶಿಕ್ಷಕರೊಬ್ಬರು 4 ನೇ ತರಗತಿಯ ಈ ಬಾಲಕಿಯನ್ನು ಕುಕ್ಕರ್‌ ನಲ್ಲಿರುವ ಅಡುಗೆ ಬಡಿಸಿಕೊಂಡು ಊಟ ಮಾಡಲು ಹೇಳಿದ್ದಾರೆನ್ನಲಾಗಿದೆ. 

ಅಡುಗೆ ಕೋಣೆಗೆ ಹೋದ ಶಾಲಾ ಬಾಲಕಿ ಏಕಾಷಕಿ ಕುಕ್ಕರ್‌ ಮುಚ್ಚಳ ತೆಗೆದಿದ್ದಾಳೆ. ಪರಿಣಾಮ ಕುಕ್ಕರ್‌ ದಿಢೀರ್‌ ಸಿಡಿದಿದೆ ಎಂದು ತಿಳಿದು ಬಂದಿದೆ.    ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್‌ ಠಾಷಾ ವ್ಯಾಪ್ತಿಯ ಮಾಕೋಡು ಗ್ರಾಮದಲ್ಲಿ ವರದಿಯಾಗಿದೆ.




Powered by Blogger.