ಕಾರ್ಕಳ: ದೈವ ನರ್ತನ ಮಾಡುವವರಿಗೆ ಮಾಸಾಶನ: ಸುನೀಲ್ ಕುಮಾರ್
ಕನ್ನಡದ ಕಾಂತಾರಾ ಚಿತ್ರದ ಜನಪ್ರಿಯತೆ ನಡುವೆಯೇ ಇದೀಗ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ... ದೈವ ನರ್ತನ ಮಾಡುವವರಿಗೆ ಮಾಸಾಶನ (ಜೀವನ ನಿರ್ವಹಣೆಗಾಗಿ) ನೀಡಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಮಾನ್ಯ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೈವ ನರ್ತನ ಮಾಡುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 2000 ರೂಪಾಯಿ ಮಾಸಾಶನ ನೀಡಲಾಗುವುದು ಎಂದರು.
ಇದೇ ವೇಳೆ ಕಾಂತಾರಾ ಚಿತ್ರದ ಬಗ್ಗೆ ನಟ ಚೇತನ್ ಹೇಳಿಕೆ ವಿಚಾರವಾಗಿ ಸಂಸ್ಕೃತಿ ಇಲ್ಲದವರು, ಸಂಸ್ಕೃತಿ ಬಗ್ಗೆ ಮಾತನಾಡಬಾರದು. ದೈವ ನರ್ತನ ಹಿಂದೂ ಸಂಸ್ಕೃತಿ ಒಂದು ಭಾಗ. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ ಎಂದು ಹೇಳಿದರು.
ಇದೇ ವೇಳೆ ಕಾಂತಾರಾ ಚಿತ್ರದ ಬಗ್ಗೆ ನಟ ಚೇತನ್ ಹೇಳಿಕೆ ವಿಚಾರವಾಗಿ ಸಂಸ್ಕೃತಿ ಇಲ್ಲದವರು, ಸಂಸ್ಕೃತಿ ಬಗ್ಗೆ ಮಾತನಾಡಬಾರದು. ದೈವ ನರ್ತನ ಹಿಂದೂ ಸಂಸ್ಕೃತಿ ಒಂದು ಭಾಗ. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ ಎಂದು ಹೇಳಿದರು.
Post a Comment