ಮಲ್ಪೆ: ರಾಷ್ಟ್ರೀ ಯ ಈಜುಪಟು 66ರ ಹರೆಯದ ಗಂಗಾಧರ ಜಿ. ಕಡೆಕಾರು ಅವರು ಒಂದೇ ಬಾರಿಗೆ ಎರಡು ವಿಶ್ವದಾಖಲೆಗಳು
ಸಮುದ್ರದಲ್ಲಿ ಪ್ರಕ್ಷುಬ್ಧವಾಗಿದ್ದರೂ 66ರ ಹರೆಯದಲ್ಲಿ ಒಂದೇ ಬಾರಿಗೆ ಎರಡು ವಿಶ್ವದಾಖಲೆ ಮಾಡಿರುವುದು
ನಿಜಕ್ಕೂ ಸಾಧನೆಯೇ !
ಕಿದಿಯೂರು ಪಡುಕರೆ ಸಮುದ್ರದಲ್ಲಿ ಜನವರಿ 24-2022 ರಂದು ಕೈಗಳನ್ನು ಹಿಂದಕ್ಕೆ ಮಡಚಿ ಕೋಳ ತೊಟ್ಟು 3.5 ಕಿ.ಮೀ. ದೂರವನ್ನು ಕ್ರಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದರು. ಪ್ರಕ್ಷುಬ್ಧವಾ ಗಿದ್ದ ಕಡಲಿನಲ್ಲಿ 5.35 ಗಂಟೆಗಳ ಕಾಲ ನಿರಂತರವಾಗಿ ಈಜಿರುವುದು ಅವರ ಇನ್ನೊಂದು ದಾಖಲೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ : ರೆಕಾರ್ಡ್‌ತೀರ್ಪುಗಾರ ಮನೀಷ್ ವೈಷ್ಣೋ ಯ್ ಅವರು ಅಂದು ಮೊದಲ ದಾ ಖಲೆಯ ಪರಿಶೀಲನೆಗೆ ಮಾತ್ರ ಬಂದಿದ್ದರು. ಆದರಂತೆ 3.5 ಕಿ.ಮೀ. ದೂರದ ದಾಖಲೆಯನ್ನು ಮಾತ್ರ ಘೋಷಿಸಿ ತಾತ್ಕಾಲಿಕ ಪ್ರಮಾಣ ಪತ್ರ ನೀಡಿದ್ದರು. ಪ್ರಕ್ಷುಬ್ಧ ಕಡಲಿನಲ್ಲಿ 5.35 ಗಂಟೆ ಈಜಿರುವುದೂ ಅವರ ಇನ್ನೊಂದು ದಾಖಲೆ ಆಗಿದ್ದರೂ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಪ್ರಮಾಣಪತ್ರ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದರು.
ಪ್ರಸ್ತುತ ಪ್ರಮಾಣಪತ್ರ ಗಂಗಾಧರ ಅವರ ಕೈಸೇರಿದೆ. ಅವರು ಕಳೆದ ವರ್ಷ 2021ರ ಜನವರಿ 23ರಂದು ಪ್ರದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1.40 ಕಿ.ಮೀ. ಬ್ರೆಸ್ಟ್ ಸ್ಟ್ರೋ ಕ್ ಶೈಲಿಯಲ್ಲಿ ಸಮುದ್ರದಲ್ಲಿ ಈಜಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದರು. . . ಎರಡೂ ದಾ ಖಲೆಗಳ ಪ್ರಮಾಣ ಪತ್ರವನ್ನು ಅವರಿಗೆ ಕಳುಹಿಸಿ ಕೊಡಲಾಗಿದೆ.– ಮನೀಶ್ ವೈಷ್ಣೋ ಯ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ತೀರ್ಪುಗಾರ.
Post a Comment