ಶಾಲಾ ಬಾಲಕಿ ಅಪಹರಣಕ್ಕೆ ಯತ್ನ: ಧೈರ್ಯ ಮೆರೆದ ವಿದ್ಯಾರ್ಥಿಗಳು
- ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಕಡಿದಾಳು ಮಂಜಪ್ಪ ಸರ್ಕಲ್‌ನಲ್ಲಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ತಿಳಿಸಿದಂತೆ ಮಾರುತಿ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಚಾಕೋಲೆಟ್ ಕೊಡುವ ನೆಪದಲ್ಲಿ ಕರೆದು ಆಕೆಯ ಕೈ ಹಿಡಿದು ಎಳೆದಿದ್ದಾರೆ. - ಅಷ್ಟರಲ್ಲಿ ಸಮೀಪದಲ್ಲೇ ನಡೆದುಕೊಂಡು ಹೋಗುತ್ತಿದ್ದ ಹಿರಿಯ ವಿದ್ಯಾರ್ಥಿಯೊಬ್ಬ ಬಾಲಕಿಯ ಕೈ ಹಿಡಿದುಕೊಂಡು ಬೊಬ್ಬೆ ಹೊಡೆದಿದ್ದಾನೆ. ಜೊತೆಯಲ್ಲಿದ್ದ ಮೂರನೇ ತರಗತಿಯ ಅಕುಲ್ ಬಾಲಕಿಯನ್ನು ಎಳೆಯುತ್ತಿದ್ದವನ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಮಕ್ಕಳ ಕೂಗಾಟ ಕೇಳಿ ಜನರು ಸೇರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಕಾರಿನಲ್ಲಿ ಸುಮಾರು 25ರ ವಯೋಮಾನದ, ಮುಖಕ್ಕೆ ಕಪ್ಪುಬಟ್ಟೆಕಟ್ಟಿಕೊಂಡಿದ್ದ ಐದು ಮಂದಿ ಇದ್ದರು ಎನ್ನಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದುರ್ಘಟನೆಯೊಂದು ಸ್ವಲ್ಪದರಲ್ಲಿ ತಪ್ಪಿದೆ.
ಈ ಘಟನೆಯಿಂದ ಬಾಲಕಿ ಪೋಷಕರಲ್ಲಿ ಭೀತಿ ಮೂಡಿಸಿದೆ. ಆರೋಪಿಗಳಿದ್ದ ಕಾರು ಎರಡು ಮೂರು ಬಾರಿ ಸಂಚರಿಸಿದ ದೃಶ್ಯ ಮೇಲಿನಕುರುವಳ್ಳಿಯಲ್ಲಿ ಮಂಜು ಟೈಲ್ಸ್ ಮಳಿಗೆಯ ಸಿ.ಸಿ. ಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದರು.

Post a Comment