".

Header Ads

ದೈವ ಚಾಕರಿ ವರ್ಗದವರಿಂದ ಮಾನ್ಯ ಸುನಿಲ್ ಕುಮಾರ್ ಅವರಿಗೆ ಮನವಿ


ದೈವ ನರ್ತನ ಮಾಡುವವರಿಗೆ ಮಾಸಾಶನ (ಜೀವನ ನಿರ್ವಹಣೆಗಾಗಿ)  ನೀಡುವ ಬಗ್ಗೆ ಈಗಾಗಲೇ ರಾಜ್ಯ ಸರಕಾರ ಘೋಷಣೆ ಮಾಡಿದೆ. 

ದೈವ ನರ್ತನ ಮಾಡುವ 60 ವರ್ಷ ಮೇಲ್ಪಟ್ಟವರಿಗೆ  ಪ್ರತಿ ತಿಂಗಳು 2000 ರೂಪಾಯಿ ಮಾಸಾಶನ ನೀಡಲಾಗುವುದು ಎಂದು ಮಾನ್ಯ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಘೋಷಿಸಿದ್ದರು. 

ಆದರೆ ಕೇವಲ ದೈವ ನರ್ತಕರಿಗಷ್ಟೇ ಮಾಸಾಶನ ಘೋಷಿಸಿರುವುದು, ದೈವ ಚಾಕರಿ ಮಾಡುವ ವರ್ಗಕ್ಕೆ ಜೀವನ ನಿರ್ವಹಣೆ ಮಾಡಲು ಯಾವುದೇ ರೀತಿಯ ಆದಾಯ ಮೂಲವಿಲ್ಲದಿರುವ ಕಾರಣ ಅವರೂ ಕೂಡ ಧನ ಸಹಾಯವನ್ನು ಸರಕಾರದ ಕಡೆಯಿಂದ ಅಪೇಕ್ಷಿಸಿದ್ದಾರೆ. 

ತನ್ನ ಕ್ಷೇತ್ರದಾದ್ಯಂತ ಈಗಾಗಲೇ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಿ, ಜನಮಾನಸದಲ್ಲಿ ನೆಲೆಯಾಗಿರುವ ಮಾನ್ಯ ಸುನಿಲ್ ಕುಮಾರ್ ಅವರೊಂದಿಗೆ ದೈವ ಚಾಕರಿ ಮಾಡುವ ವರ್ಗವು ಮನವಿ ಮಾಡಿದೆ. 

ದೈವಾರಾಧನೆ  ಕ್ಷೇತ್ರದಲ್ಲಿ ದೈವ ಚಾಕ್ರಿ ಮಾಡುವ 16 ವರ್ಗ ಗಳಿದ್ದು ನಮಗೂ ಏನಾದರೂ ಸಹಾಯ ಮಾಡಿ ಎಂದು ಅವರು ಮಾನ್ಯ ಸುನಿಲ್ ಕುಮಾರ್ ಅವರಲ್ಲಿ ಕೋರಿಕೊಂಡಿದ್ದಾರೆ. 

ದೈವ ಚಕಾರಿಯಲ್ಲಿ ಪ್ರಮುಖವಾಗಿ ಕೊರಗ  ಸಮುದಾಯ,  ಗರಡಿ ಚಾಕ್ರಿ ವರ್ಗ, ಮುಂಡಲ ಸಮುದಾಯ ವರ್ಗ  ಹೀಗೆ ಹಲವಾರು ಪ್ರಮುಖ ವರ್ಗಗಳಿವೆ.

 60 ವರ್ಷ ಮೇಲ್ಪಟ್ಟ ಎಲ್ಲಾ ದೈವ ಚಾಕರಿ ವರ್ಗದವರಿಗೂ ಪಿಂಚಣಿ ಕೊಡುವ ಯೋಜನೆ ಜಾರಿಯಾಗಬೇಕು ಇದು ಸಮಸ್ತ ದೈವ ಚಾಕರಿ ವರ್ಗ ಮನವಿಯಾಗಿದೆ.

Powered by Blogger.