".

Header Ads

ಕೊರೊನಾ ಓಮಿಕ್ರಾನ್‌ನ ಉಪ ರೂಪಾಂತರಿ ತಳಿ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಪತ್ತೆ!


ಕೊರೊನಾ ಓಮಿಕ್ರಾನ್‌ನ ಉಪ ರೂಪಾಂತರಿ ತಳಿ ಎಕ್ಸ್‌ಬಿಬಿ ವೈರಸ್  ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಪತ್ತೆಯಾಗಿದೆ. 




ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ವೈರಸ್ ಆಗಿರುವ ಎಕ್ಸ್‌ಬಿಬಿ ತಳಿಯ 6 ಪ್ರಕರಣಗಳು ಕರ್ನಾಟಕದಲ್ಲಿ ಈವರೆಗೆ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನಲ್ಲಿ ೫೨, ಒಡಿಶಾ 35, ಪಶ್ಚಿಮ ಬಂಗಾಳ 17, ಮಹಾರಾಷ್ಟ್ರ 17, ದಿಲ್ಲಿ 6, ಗುಜರಾತ್ 2 ಹಾಗೂ ರಾಜಸ್ಥಾನದಲ್ಲಿ 1 ಎಕ್ಸ್‌ಬಿಬಿ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ.








ದೀಪಾವಳಿ ಹಬ್ಬದ ವೇಳೆ ಜನರು ಒಂದೆಡೆ ಗುಂಪು ಸೇರುವುದಲ್ಲದೆ ಚಳಿಗಾಲ ಕೂಡಾ ಇರುವುದರಿಂದ ಸೋಂಕು ಪ್ರಕರಣಕ್ಕೆ ಅನುಕೂಲಕರ ಸನ್ನಿವೇಶ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜನತೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಓಮಿಕ್ರಾನ್ ಉಪ ರೂಪಾಂತರಿ ತಳಿ ಎಕ್ಸ್‌ಬಿಬಿ ಮಾತ್ರವಲ್ಲ, ಬಿಎ.2.75 ಕೂಡಾ ಅತಿ ವೇಗವಾಗಿ ಸೋಂಕು ಪ್ರಸರಣ ಶಕ್ತಿ ಹೊಂದಿರುವ ವೈರಸ್ ಆಗಿದ್ದು, ಇದೀಗ ನಿಧಾನವಾಗಿ ಈ ವೈರಸ್‌ನ ಹಾವಳಿ ಕಡಿಮೆ ಆಗುತ್ತಿದೆ. ಆದಾಗ್ಯೂ ಕಳೆದ ವಾರ ಪತ್ತೆಯಾಗಿದ್ದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಶೇ. 70 ರಷ್ಟು ಪ್ರಕರಣಗಳು ಬಿಎ.2.75 ವೈರಸ್‌ನಿಂದ ಸೋಂಕು ಹರಡಲು ಕಾರಣವಾಗಿತ್ತು. 

Powered by Blogger.