* *ದೀಪಾವಳಿ **
ಬೆಳಕಾಯಿತು ಇಂದು
ಜಗವೆಲ್ಲ ಬೆಳಕಾಯಿತು..
ಕತ್ತಲೆಯ ಕರಗಿಸುತ
ಸುತ್ತ ಮುತ್ತಲ ಎಲ್ಲೆಡೆ ತಾರೆಗಳoತೆ ಬೆಳಕಾಯಿತು
ಸೂರ್ಯ ರಶ್ಮಿಯ
ನೋಡದ ಕಾಡೂ..
ದೀಪಾವಳಿಯ ದೀಪದ
ಹೊಳಪೊಳು ಬೆಳಕಾಯಿತು.
ಅಂಗಳದಿ ಅರಳಿದ
ರಂಗೋಲಿ ಬಣ್ಣದೊಳ
ಚಿಕ್ಕ ಪುಟ್ಟ ಚುಕ್ಕೆ ಯ
ನಡುವೆ ಬೆಳಕಾಯಿತು
ಹುಣ್ಣಿಮೆಯ ಚಂದಿರನ
ಬೆಚ್ಚಿಸುವ ಪರಿಯಲ್ಲಿ
ಭುವಿಯ ಮೂಲೆ ಮೂಲೆ
ಸೌಂದರ್ಯದ ಬೆಳಕಾಯಿತು
ಸಂಜೆ ದೀಪದ ಬೆಳಕ ಕಾಣದ
ಬಡವನ ಮನೆ ಚಾವಣಿ ಯೊಳು
ಗೂಡು ದೀಪ ನಕ್ಷತ್ರ ದ ಬೆಳಕಲಿ
ಹರುಷ ತುಂಬಿ ಬೆಳಕಾಯಿತು
ಬೆಳಕಾಯಿತು ಮತ್ತೊಮ್ಮೆ .
ಭವದ ಹಾದೀಯೊಳು..
ಹೊಸ ಕನಸುಗಳು...
ಬೆಳಕಾಯಿತು...
✍ ಹೇಮಕವಿ
![]() |
| ಕಾವೂರು ಗುತ್ತು ಹೇಮಂತ್ ಶೆಟ್ಟಿ |



.jpeg)

.jpeg)
.jpeg)
.jpeg)
.jpeg)



.jpeg)
.jpeg)

.jpeg)


Post a Comment