".

Header Ads

ಉಡುಪಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ನಗದು ರಹಿತ ವಹಿವಾಟು ನಡೆಸಲು ಜಿ.ಪಂ. ನಿರ್ದೇಶನ

 ಹಣಕಾಸಿನ ಅವ್ಯವಹಾರ ತಪ್ಪಿಸಲು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ನಗದು ರಹಿತ ವಹಿವಾಟು ನಡೆಸಲು ಜಿ.ಪಂ. ನಿರ್ದೇಶನ ನೀಡಿದೆ. ವಿವಿಧ ರೀತಿಯ ತೆರಿಗೆ, ನೀರಿನ ಶುಲ್ಕ ಪಾವತಿ ಸೇರಿದಂತೆ ನಾನಾ ಸೇವೆಗಳಿಗೆ ಪ್ರತೀ ದಿನ ಸಾರ್ವಜನಿಕರು ಗ್ರಾ.ಪಂ.ಗೆ ಹೋಗುತ್ತಾರೆ. 


ಸದ್ಯ ಬಹುತೇಕ ಗ್ರಾ.ಪಂ.ಗಳಲ್ಲಿ ಕಾಗದರಲ್ಲಿ ಬರದೇ ರಶೀದಿ ನೀಡುವ ವ್ಯವಸ್ಥೆಯಿದೆ. ಇದರಿಂದ ಹಣಕಾಸಿನ ಅವ್ಯವಹಾರ ನಡೆಯುವ ಸಾಧ್ಯತೆಯಿದೆ. ಅಲ್ಲದೆ ಶುಲ್ಕ ಪಡೆದು ಬಿಲ್ ನೀಡದ ನೀಡದೆ ಇರುವ ನಿದರ್ಶನವೂ ಇರುತ್ತದೆ.  ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಗ್ರಾ.ಪಂ.ಗಳಲ್ಲಿ ನಗದು ರಹಿತ ವಹಿವಾಟಿಗೆ ಸೂಚನೆ ನೀಡಲಾಗಿದೆ.

  ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿದ್ದು, ಇದರಲ್ಲಿ ಕೆಲವು ಗ್ರಾ.ಪಂ.ಗಳು ತೀರಾ ಗ್ರಾಮೀಣ ಭಾಗದಲ್ಲಿವೆ. ಹೀಗಾಗಿ ನಗದು ರಹಿತ ವಹಿವಾಟು ಕಷ್ಟ ಎಂಬುದು ಜಿ.ಪಂ. ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಗ್ರಾ.ಪಂ.ಗಳಿಗೆ ಸ್ವೆ„ಪಿಂಗ್ ಯಂತ್ರ, ಅಗತ್ಯ ಇರುವ ಸಾರ್ವಜನಿಕರಿಗೆ ಬ್ಯಾಂ ಕ್ ಅಕೌಂಟ್ ಮತ್ತು ಎಟಿಎಂ ಕಾರ್ಡ್‌ಗಳನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ. 

ಹೀಗಾಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗದು ರಹಿತ ವಹಿವಾಟಿಗೆ ನಿರ್ದೇಶನ ಮಾಡಲಾಗಿದೆ ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್. ಮಾಹಿತಿ ನೀಡಿದರು. 





















Powered by Blogger.