ಪಳ್ಳಿ :- ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಮುತಾಲಿಕ್ ಕರೆ
(ಚಿತ್ರ : ವಿಘ್ನೇಶ್ ಬಿ. ನಾಯಕ್, ಕಲ್ಕಾರ್)
ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಆರಂಭಗೊಂಡಿದ್ದು, ಹಲಾಲ್ ಮುಕ್ತ ದೀಪಾವಳಿಯನ್ನು ಆಚರಿಸೋಣ ಎಂಬುದಾಗಿ ಹಿಂದುತ್ವವನ್ನೇ ತನ್ನ ಉಸಿರಾಗಿರಿಸಿರುವ ಅಪ್ಪಟ ದೇಶ ಪ್ರೇಮಿ, ಸಮಸ್ತ ಹಿಂದೂ ಜನರ ಕಣ್ಮಣಿ ಹಿಂದೂ ಹುಲಿ, ಹಿಂದೂ ಹೃದಯ ಸಾಮ್ರಾಟ ಶ್ರೀ ಪ್ರಮೋದ್ ಮುತಾಲಿಕ್ ರವರು ನಮ್ಮ ಪಳ್ಳಿ ಗ್ರಾಮದ 'ಲಕ್ಷೀ ಕೃಪ ಕಲ್ಯಾಣ ಮಂಟಪ 'ದಲ್ಲಿಂದು ಹಿಂದೂ ಬಂದುಗಳಿಗೆ ಕರೆ ನೀಡಿದರು.
ಹಲಾಲ್ ದೇಶದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಮುಸ್ಲಿಂ ವ್ಯಾಪಾರಿಗಳಿಂದ ಹಲಾಲ್ ಸರ್ಟಿಫಿಕೇಟ್ ಸಾಮಗ್ರಿಗಳನ್ನು ಖರೀದಿಸಿದರೆ ಅಶಾಸ್ತ್ರವಾಗುತ್ತದೆ. ಇದು ನಮ್ಮ ಧರ್ಮಕ್ಕೆ ಅಪಮಾನ ಮಾಡಿದಂತೆ ಎಂದು ತಿಳಿಸಿದರು. ದೇಶದ ವಿಧ್ವಂಸಕ ಕೃತ್ಯಗಳಿಗೆ ಈ ಹಲಾಲ್ ಹಣವನ್ನು ಬಳಸಲಾಗುತ್ತಿದೆ. ದೇಶದ್ರೋಹಿ ಪಿಎಫ್‍ಐಗೆ ಮೂಲ ಆದಾಯ ಈ ಹಲಾಲ್ ಆಗಿದೆ. ಪ್ರತಿಭಟನೆಗೆ ಕೊಡ ಹಲಾಲ್‍ನಿಂದಲೇ ಹಣ ವರ್ಗಾವಣೆಯಾಗುತ್ತದೆ.
ನಾವು ಖರೀದಿಸುವ ಹಲಾಲ್ ಸರ್ಟಿಫಿಕೇಟ್ ನೀಡುವ ಸಾಮಗ್ರಿಗಳನ್ನು ಖರೀದಿ ಮಾಡುವುದರಿಂದ ರಾಕ್ಷಸರು ಹುಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು. ಹಲಾಲ್ ಮುಕ್ತ ದೀಪಾವಳಿಯನ್ನು ಈ ಬಾರಿ ಹಿಂದೂ ಸಮಾಜ ಮಾಡಬೇಕು. ಕಬ್ಬು, ಹೂ, ಹಣ್ಣು, ಪೂಜೆ ಸಾಮಗ್ರಿಗಳನ್ನು ಎಲ್ಲಾ ಹಿಂದೂ ವ್ಯಾಪಾರಿಗಳಿಂದ ಖರೀದಿ ಮಾಡಬೇಕು ಎಂದರು.


.jpeg)
.jpeg)

.jpeg)
.jpg)
.jpeg)
.jpg)
.jpg)
.jpeg)
.jpg)
.jpeg)
.jpeg)
.jpg)
.jpeg)
.jpeg)
.jpg)
.jpeg)
.jpg)
.jpeg)
Post a Comment