".

Header Ads

ಏರ್‌ಪೋರ್ಟ್‌ನಲ್ಲಿ ವ್ಯಕ್ತಿಯ ಬಂಧನ; ಕಾರಣ ಆತನ ಕತ್ತಿನಲ್ಲಿತ್ತು 900 ಗ್ರಾಂ ಚಿನ್ನದ ಸರ!


ಬೆಂಗಳೂರು ಕಸ್ಟಮ್ಸ್‌ ಡಿಪಾರ್ಟ್‌ಮೆಂಟ್‌ ಅಧಿಕಾರಿಗಳು ಸೋಮವಾರ ನಡೆಸಿದ ಕಾರ್ಯಾಚರಣೆ ಇದಾಗಿತ್ತು. ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಬಂಧಿತ ವ್ಯಕ್ತಿ ಕಚ್ಚಾ ಚಿನ್ನದ ಸರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂಬ ಆರೋಪ ಹೊರಿಸಲಾಗಿದೆ.

ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದ ಬಂಧಿತ ವ್ಯಕ್ತಿಯಿಂದ 900 ಗ್ರಾಂ ತೂಕದ ಅಂದಾಜು 46 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಬಳಿಕ ಆರೋಪಿಯ ವಿಚಾರಣೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಚಿತ ಗುಪ್ತಚರ ವಿಶೇಷವಾಗಿ ಏರ್‌ ಇಂಟೆಲಿಜೆನ್ಸ್‌ ಘಟಕದ ಮಾಹಿತಿ ಆಧರಿಸಿ, ಈ ಕಾರ್ಯಾಚರಣೆ ನಡೆಸಲಾಗಿತ್ತು. ವಿದೇಶಿ ಮೂಲದ ಪ್ರಜೆಯೊಬ್ಬ ಕಚ್ಚಾ ಚಿನ್ನದ ಸರಗಳನ್ನು ಹೊಂದಿದ್ದು, ಮುಂಬೈನಿಂದ   ಬೆಂಗಳೂರಿಗೆ ಪ್ರಯಾಣಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. 

ಕಚ್ಚಾ ಚಿನ್ನದ ಸರಗಳು ಒಟ್ಟು 898.8 ಗ್ರಾಂ ತೂಕ ಇದ್ದವು. ಇದರ ಮೌಲ್ಯ 46,74,332 ರೂಪಾಯಿ. ಹೆಚ್ಚಿನ ವಿಚಾರಣೆ ಮುಂದುವರಿದಿದೆ ಎಂದು ಇಲಾಖೆ ತಿಳಿಸಿದೆ.


Powered by Blogger.