".

Header Ads

ಪೊಲೀಸ್‌ ತನಿಖೆಯಲ್ಲಿ ಬಹಿರಂಗ: ಪಿಎಫ್‌ಐನಿಂದ ಕರ್ನಾಟದಲ್ಲಿ 9 ಕೋಟಿ ದೇಣಿಗೆ ಸಂಗ್ರಹ


ಇತ್ತೀಚಿಗೆ ನಿಷೇಧಕ್ಕೊಳಗಾದ ಪಿಎಫ್‌ಐ  ರಾಜ್ಯ ಘಟಕವು ಮುಸ್ಲಿಂ ಸಮುದಾಯಕ್ಕೆ ಸಂಕಷ್ಟದಲ್ಲಿ ಆರ್ಥಿಕ ಸಹಾಯ ಕಲ್ಪಿಸುವುದಾಗಿ ಹೇಳಿ ಕಳೆದ ಒಂದು ದಶಕದ ಅವಧಿಯಲ್ಲಿ 9 ಕೋಟಿ ರು. ದೇಣಿಗೆಯನ್ನು ಸಂಗ್ರಹಿಸಿತ್ತು ಎಂಬ ಮಹತ್ವದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಕೋಮು ಗಲಭೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರು ಸೇರಿದಂತೆ 200ಕ್ಕೂ ಹೆಚ್ಚಿನ ಮುಸ್ಲಿಂ ಸಮುದಾಯದವರಿಗೆ ಪಿಎಫ್‌ಐ ನೇರವಾಗಿ ಹಣಕಾಸು ನೆರವು ಕೂಡ ನೀಡಿದೆ. ಈ ಆರ್ಥಿಕ ವಹಿವಾಟಿನ ಕುರಿತ ದಾಖಲೆಗಳನ್ನು ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಮೂಲಗಳು  ತಿಳಿಸಿವೆ.

ತನ್ನ ಸಂಘಟನೆಯ ಹೆಸರಿನಲ್ಲಿ ಪಿಎಫ್‌ಐ ಬ್ಯಾಂಕ್‌ ಖಾತೆ ಹೊಂದಿತ್ತು. ಈ ಖಾತೆಗೆ 2012ರಿಂದ 2022 ವರೆಗೆ 9 ಕೋಟಿ ರು. ಹಣ ದೇಣಿಗೆ ಸಂಗ್ರಹವಾಗಿದೆ.

 ತಮ್ಮ ಖಾತೆಗೆ ಜಮೆಯಾದ ಮರು ದಿನವೇ ಹಣವನ್ನು ಡ್ರಾ ಮಾಡಿಕೊಂಡು ರಾಷ್ಟ್ರೀಯ ಘಟಕದ ಖಾತೆಗೆ ರಾಜ್ಯದ ಮುಖಂಡರು ವರ್ಗಾಯಿಸಿದ್ದರು ಹಾಗೂ ಸಮಾಜದಲ್ಲಿ ಎರಡು ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಲು ಹಾಗೂ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಬೆಂಗಳೂರು ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಸೆ.23 ರಂದು ದಾಳಿ ನಡೆಸಿ ಪ್ಯಾಫುಲರ್‌ ಫ್ರಂಟ್‌ ಆಫ್‌ ಇಂಡಿಯಾ  ಸಂಘಟನೆಯ ಪ್ರಮುಖ 15 ಮಂದಿ ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರ್ಥಿಕ ವ್ಯವಹಾರವನ್ನು ಪರಿಶೀಲಿಸಿದಾಗ ದೇಣಿಗೆ ಸಂಗ್ರಹ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


Powered by Blogger.