ಪಡುಬಿದ್ರಿ : ಶ್ರೀ ಆದಿಶಕ್ತಿ ಆದಿ ಮಹಾಮಾಯೆ, ಅಣ್ಣಪ್ಪ ಪಂಜುರ್ಲಿ, ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿ
ಉಡುಪಿ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ಆದಿಶಕ್ತಿ ಆದಿ ಮಹಾಮಾಯೆ, ಅಣ್ಣಪ್ಪ ಪಂಜುರ್ಲಿ, ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿ ಪಡುಬಿದ್ರಿ-ಉಡುಪಿ ಕ್ಷೇತ್ರದ ಸಮಿತಿಯ ವಿಜ್ಞಾಪನೆ ಪತ್ರ ಬಿಡುಗಡೆ ಹಾಗೂ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿರುವುದು.
ದಿನಾಂಕ 2022 ರ, ಶನಿವಾರ ಅ.22 ರಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆಗೊಳ್ಳಲಿರುವುದು.
ಬಳಿಕ ಸಂಜೆ 4 ಗಂಟೆಗೆ ಸರಿಯಾಗಿ ಜೀರ್ಣೋದ್ಧಾರ ಸಮಿತಿ ಊರ ಪರವೂರ ಭಕ್ತರ ಸಹಕಾರದಿಂದ ಸಾಮೂಹಿಕ ಕೊರಗಜ್ಜ ದೈವದ ನೇಮೋತ್ಸವ ಜರಗಲಿರುವುದು.
ಈ ಪುಣ್ಯಕಾರ್ಯದಲ್ಲಿ ಊರ ಪರವೂರ ಭಕ್ತರು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಧರ್ಮದರ್ಶಿಗಳು ಹಾಗೂ ಜೀರ್ಣೋದ್ಧಾರ ಸಮಿತಿಯ ಸಂಚಾಲಕರು, ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಕಾರ್ಯಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.


Post a Comment