ಕಾರ್ಕಳ - ಪಳ್ಳಿ: ಸೂಡ ವಿದ್ಯಾರ್ಥಿ ಶವ ರೈಲ್ವೆ ಹಳಿಯಲ್ಲಿ ಪತ್ತೆ ?
17ರ ವಯೋಮಾನದ ಎಲ್ಲೂರು ಗ್ರಾಮದ ನಂದಿಕೂರು ಸಮೀಪದ ಕೊಳಚ್ಚೂರು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಛಿದ್ರಗೊಂಡ ಶವ ಪತ್ತೆಯಾಗಿದೆ.
ಈ ಬಗ್ಗೆ ಸ್ಟೇಷನ್ ಮಾಸ್ಟರ್ ದಿನೇಶ್ ಎಂಬವರು ಪಡುಬಿದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.
ಈ ಕುರಿತು ಪೊಲೀಸರು ಪರಿಶೀಲಿಸಲಾಗಿ, ಆ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ ಈತ ಕಾರ್ಕಳ ತಾಲೂಕು ಸೂಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಆದರ್ಶ (16) ಎಂದು ತಿಳಿದುಬಂದಿದೆ.
ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಯಾವ ಕಾರಣಕ್ಕಾಗಿ ಎಂಬುದನ್ನು ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment