".

Header Ads

ಚಿಣ್ಣರ ಬಿಂಬ ಕಲ್ವಾ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

ಕಲ್ವಾ : ಕಲ್ವಾ ಪರಿಸರದಲ್ಲಿರುವ ತುಳುನಾಡಿನ ಮಕ್ಕಳು ಕರ್ಮಭೂಮಿಯ ಮರಾಠಿ ಭಾಷೆ ,ಶಾಲೆಯಲ್ಲಿ ಆಂಗ್ಲಭಾಷೆಯ ಜೊತೆಗೆ ಕನ್ನಡವನ್ನೂ ಓದಲು ಬರೆಯಲು ಸಮರ್ಥರಾಗಬೇಕು. ಉತ್ತಮ ಆಚಾರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂಬ ಸದುದ್ದೇಶದಿಂದ ಮುಂಬಯಿಯಲ್ಲಿ ಶ್ರೀ ಪ್ರಕಾಶ್ ಭಂಡಾರಿ, ಶ್ರೀ ಸುರೇಂದ್ರಕುಮಾರ್ ಹೆಗ್ಡೆ ಹಾಗೂ ಶ್ರೀ ವಿಜಯ ಕುಮಾರ್ ಶೆಟ್ಟಿಯವರು ಚಿಣ್ಣರ ಬಿಂಬ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಚಿಣ್ಣರ ಬಿಂಬವು ಪ್ರತಿವರ್ಷವೂ ಪ್ರತಿಶಿಬಿರದಲ್ಲೂ ಎಲ್ಲಾ ಮಕ್ಕಳ ಪ್ರತಿಭೆಗೂ ಪ್ರೋತ್ಸಾಹ  ನೀಡುತ್ತಾ ಬಂದಿದೆ. ಮಕ್ಕಳಿಗೆ ಹಾಗೂ ಪಾಲಕರಿಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದೆ. ಅಂತೆಯೇ ಈ ವರ್ಷ ಚಿಣ್ಣರ ಬಿಂಬದ ಸಂಸ್ಥೆಗಳಲ್ಲಿ ಒಂದಾದ ಕಲ್ವಾ ಶಿಬಿರದ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಯು ಸೆ.25 ರ ರವಿವಾರದಂದು ಕಲ್ವಾ ಖಾರೆಗಾಂವ್ ನ ಪದ್ಮಾವತಿ ಹೈಸ್ಕೂಲ್ ನ ಸಭಾಭವನದಲ್ಲಿ ನೆರವೇರಿತು.


ಶಿಬಿರದ ಮಕ್ಕಳ ಭಜನೆಯೊಂದಿಗೆ ಪ್ರಾರಂಭವಾದ ಪ್ರತಿಭಾ ಸ್ಪರ್ಧೆಯು ನಂತರ ಮಕ್ಕಳ ಸ್ಪರ್ಧೆಗಳು ಹಾಗೂ ಪಾಲಕರ ಸ್ಪರ್ಧೆಗಳು ನಡೆದವು.

ಕಲ್ವಾ ಶಿಬಿರದ ಕಾರ್ಯಕ್ರಮಕ್ಕೆ ಬಹಳ ಸಂತೋಷದಿಂದ ಆಗಮಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಕೋಪ್ರಿ ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಮಣಿಯಾಣಿ ಯವರು, ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಗಾಣಿಗ ಸಮಾಜದ ಮಾಜಿಅಧ್ಯಕ್ಷರಾದ ಶ್ರೀ ರಾಮಚಂದ್ರ ಗಾಣಿಗರವರು, ಮುಖ್ಯ ಅಥಿತಿಗಳಾಗಿ ಆಗಮಿಸಿರುವ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ನಾರಾಯಣ.ಎಲ್.ಸುವರ್ಣರವರ ಪುತ್ರರಾದ ಹೃಷಿ. ಎನ್. ಸುವರ್ಣರವರು, ಪದ್ಮಾವತಿ ಹೈಸ್ಕೂಲ್ ನ ಟ್ರಸ್ಟೀ ಶ್ರೀ ರಮೇಶ್ ಪಾಟೀಲ್ ರವರು, ಕಲ್ವಾ ಫ್ರೆಂಡ್ಸ್ ನ ಅಧ್ಯಕ್ಷರಾದ ರಘುರಾಮ್ ಶೆಟ್ಟಿಯವರು, ಕೇಂದ್ರ ಸಮಿತಿಯ ಸದಸ್ಯೆಯವರಾದ ಗೀತಾ ಹೇರಳ ಮೇಡಂ ರವರು ವೇದಿಕೆಯಲ್ಲಿ ಆಸೀನರಾದರು. ಇವರೆಲ್ಲರನ್ನು ಕಾರ್ಯಕ್ರಮಕ್ಕೆ ಶಿಬಿರದ ಮುಖ್ಯಸ್ಥೆಯಾದ ಶ್ರೀಮತಿ ಪದ್ಮಾವತಿ.ಯು.ಪೂಜಾರಿಯವರು ಆತ್ಮೀಯವಾಗಿ ಸ್ವಾಗತಿಸಿದರು.

ಚಿಣ್ಣರಾದ  ಸಮೀಕ್ಷಾ ,ಪ್ರತೀಕ್ಷಾ ,ರಿದ್ದಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು

 ಎಳೆ ವಯಸ್ಸಿನಲ್ಲೇ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವ ಸಂಸ್ಥೆ ಚಿಣ್ಣರ ಬಿಂಬ - ಶ್ರೀ ರಾಮಚಂದ್ರ ಗಾಣಿಗ

ದೀಪ ಪ್ರಜ್ವಲನೆ ಮಾಡಿದ ಶ್ರೀ ರಾಮಚಂದ್ರ ಗಾಣಿಗರವರು ಮಾತನಾಡಿ, ಇಂದಿನ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವ ಈ ಸಂದರ್ಭದಲ್ಲಿ ನಮ್ಮ ನಾಡಿನ ಸಂಸ್ಕತಿಯನ್ನು ಉಳಿಸಿ ಬೆಳೆಸಲು ಚಿಣ್ಣರ ಬಿಂಬದ ರೂವಾರಿಗಳು ಮಾಡುವ ಕಾರ್ಯ ಶ್ಲಾಘನೀಯ ಎಂದು ನುಡಿದರು. ಚಿಣ್ಣರ ಬಿಂಬಕ್ಕೆ ಬಂದರೆ ಶಾಲೆಯಲ್ಲಿ ಉತ್ತಮ ರೀತಿಯಲ್ಲಿ ಅಂಕ ಬರಲು ಕಷ್ಟವಾಗುತ್ತದೆ ಎಂಬ ಚಿಂತೆ ಬೇಡ ಬದಲಾಗಿ ಇನ್ನೂ ಅತ್ಯುತ್ತಮ ಅಂಕಗಳಿಸಿ ಉನ್ನತ ಹುದ್ದೆಗಳಿಸಲು  ಚಿಣ್ಣರ ಬಿಂಬದಂತಹ ಸಂಸ್ಥೆ ಒಂದು ಉತ್ತಮ ಸಂಸ್ಥೆ ಎಂದು ನುಡಿದರು.


ಸುಸಂಸ್ಕೃತ ದೇಶ ನಮ್ಮದಾಗಲು ಚಿಣ್ಣರ ಬಿಂಬದಂತಹ ಸಂಸ್ಥೆ ಇದ್ದರೆ ಮಾತ್ರ ಸಾಧ್ಯ : ಶ್ರೀ ಲಕ್ಷ್ಮಣ್ ಮಣಿಯಾಣಿ

ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಶ್ರೀ ಲಕ್ಷ್ಮಣ್ ಮಣಿಯಾಣಿಯವರು ಮಾತನಾಡಿ ಸುಸಂಸ್ಕೃತ ದೇಶ ನಮ್ಮದಾಗಲು ಚಿಣ್ಣರ ಬಿಂಬದಂತಹ ಸಂಸ್ಥೆ ಇದ್ದರೆ ಮಾತ್ರ ಸಾಧ್ಯ. ಚಿಣ್ಣರ ಬಿಂಬದ ಮಕ್ಕಳ ನಡೆ ನುಡಿ ,ಹಿರಿಯರಿಗೆ ಕೊಡುವ ಗೌರವ ಇವೆಲ್ಲವನ್ನೂ ನೋಡಿ ಮನಸಾರೆ ಮಕ್ಕಳನ್ನು ಹಾಗೂ ಸಂಸ್ಥೆಯನ್ನು ಕೊಂಡಾಡಿದರು.

ಪದ್ಮಾವತಿ ಹೈಸ್ಕೂಲ್ ನ ಮುಖ್ಯಸ್ಥರಾದ ಶ್ರೀ ರಮೇಶ್ ಪಾಟೀಲ್ ರವರು ಚಿಣ್ಣರ ಬಿಂಬದ ಕಾರ್ಯಕ್ರಮವನ್ನು ನಡೆಸಲು ಸ್ಥಳಾವಕಾಶವನ್ನು ನೀಡಿ ಚಿಣ್ಣರ ಬಿಂಬದ ಕಾರ್ಯವನ್ನು ಶ್ಲಾಘಿಸಿದರು.

ಶ್ರೀ ನಾರಾಯಣ ಎಲ್ ಸುವರ್ಣ ರವರ ಅನುಪಸ್ಥಿತಿಯಲ್ಲಿ ಅವರ ಪುತ್ರರಾದ ಹೃಷಿ ಎನ್ ಸುವರ್ಣರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಿಸಿದರು 

ಕಲ್ವಾ ಫ್ರೆಂಡ್ಸ್ ನ ಅಧ್ಯಕ್ಷರಾದ  ರಘುರಾಮ್ ಶೆಟ್ಟಿಯವರು ತುಂಬಾ ಸಂತೋಷದಿಂದ ಮಕ್ಕಳ ಕಾರ್ಯಕ್ರಮವನ್ನು ಆನಂದಿಸಿ ಹಾರೈಸಿದರು.

ಕೇಂದ್ರ ಸಮಿತಿಯ ಸದಸ್ಯೆಯಾಗಿ ಶ್ರೀಮತಿ ಗೀತಾ ಹೇರಳ ಮೇಡಂ ರವರು ಮಾತನಾಡಿ  ಮಕ್ಕಳ ಹಾಗೂ ಪಾಲಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಮಕ್ಕಳ ಪ್ರತಿಭಾ ಸ್ಪರ್ಧೆಗೆ ತೀರ್ಪುಗಾರರಾಗಿ ಶ್ರೀಮತಿ ವೇದಾವತಿ ಭಟ್ ಹಾಗೂ ಶ್ರೀ ಜಯರಾಮ್ ನಾಯಕ್ ಇವರು ಆಗಮಿಸಿ ಸಹಕರಿಸಿದರು.ಇವರ ಪರಿಚಯವನ್ನು ನೀತಾ .ಆರ್ .ಶೆಟ್ಟಿ ಹಾಗೂ ಸುಪ್ರೀತಾ . ಎಮ್. ಶೆಟ್ಟಿಯವರು ಸಭೆಯ ಮುಂದಿಟ್ಟರು.



ಶಿಬಿರದ ಶಿಕ್ಷಕಿ ಸಂಗೀತ. ಡಿ.ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧನ್ಯವಾದ ಕಾರ್ಯಕ್ರಮವನ್ನು ಶಿಬಿರದ ಸಾಂಸ್ಕೃತಿಕ ಮುಖ್ಯಸ್ಥೆ  ಶ್ರೀಮತಿ ಶಶಿಕಲಾ.ಎಸ್.ಶೆಟ್ಟಿಯವರು ನಡೆಸಿಕೊಟ್ಟರು.

ಕೇಂದ್ರ ಸಮಿತಿಯ  ಸದಸ್ಯರಾದ  ಶ್ರೀ ಅಶೋಕ್ ಶೆಟ್ಟಿ, ಜಯಂತ್ ಕುಕ್ಯಾನ್, ಭಜನೆ ಶಿಕ್ಷಕಿಯಾದ ಹೇಮಲತಾ.ಬಿ.ಶೆಟ್ಟಿ ಹಾಗೂ ಪಾಲಕರು ಅನೇಕ ರೀತಿಯಲ್ಲಿ ಸಹಕರಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.ಮಕ್ಕಳು ಹಾಗೂ ಪಾಲಕರು ಎಲ್ಲಾ ಸ್ಪರ್ಧೆಗಳಲ್ಲಿ ಅತೀ  ಉತ್ಸಾಹದಿಂದ ಪಾಲ್ಗೊಂಡು ಅನೇಕ ಬಹುಮಾನಗಳನ್ನು ಪಡೆದರು.

ವಿಜೇತರ ವಿವರ:

ಜೂನಿಯರ್ ಭಾವಗೀತೆ : ಪ್ರಥಮ- ಸಮೀಕ್ಷಾ ಆಚಾರ್ಯ ದ್ವಿತೀಯ-ಧನ್ಯಾ ಶೇಟ್  ತೃತೀಯ -ವಿಹಾನ್ ಕರ್ಕೇರಾ. 

ಸೀನಿಯರ್ ದೇಶಭಕ್ತಿಗೀತೆ : ಪ್ರಥಮ-ಪ್ರತೀಕ್ಷಾ ಮೂಲ್ಯ  ದ್ವಿತೀಯ-ಸಮೃದ್ದಿ ಆಚಾರ್ಯ ತೃತೀಯ-ಸಚಿನ್ ಶೇಟ್. 

ಜೂನಿಯರ್ ಭಾಷಣ ಸ್ಪರ್ಧೆ : ಪ್ರಥಮ-ವಿಜಯ್ ನಾಯ್ಕ್ ದ್ವಿತೀಯ-ಧನ್ಯಾ ಶೇಟ್ ತೃತೀಯ-ಶರತ್ ಶೇಟ್.

ಸೀನಿಯರ್ ಭಾಷಣ ಸ್ಪರ್ಧೆ : ಪ್ರಥಮ-ಸಮರ್ಥ್ ಶೇಟ್ ದ್ವಿತೀಯ -ಪ್ರತ್ಯಕ್ಷ್ ಶೆಟ್ಟಿ ತೃತೀಯ - ಸಜನ್ ಶೆಟ್ಟಿ.

ಏಕಪಾತ್ರಾಭಿನಯ : ಪ್ರಥಮ- ಪ್ರತ್ಯಕ್ಷ್ ಶೆಟ್ಟಿ ದ್ವಿತೀಯ- ಆದಿತ್ಯ ಅನ್ವೇಕರ್ ತೃತೀಯ -ಪ್ರತೀಕ್ಷಾ ಶೆಟ್ಟಿ. 

ಹಳೇ ವಿಧ್ಯಾರ್ಥಿಗಳ ದೇಶಭಕ್ತಿಗೀತೆ : ಪ್ರಥಮ - ಲಾಸ್ಯ ಪೂಜಾರಿ ದ್ವಿತೀಯ- ಹರ್ಷಿಣಿ ಪೂಜಾರಿ ತೃತೀಯ -ಪ್ರಜ್ವಲ್ ಮೂಲ್ಯ.

ಪಾಲಕರ ಭಾವಗೀತೆ: ಪ್ರಥಮ - ವಿದ್ಯಾ ಶೆಟ್ಟಿ ದ್ವಿತೀಯ -ಪದ್ಮಾವತಿ ಪೂಜಾರಿ ತೃತೀಯ-ರಾಧಿಕಾ ಭಂಡಾರಿ.

ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸರೋಜಾ ಶೆಟ್ಟಿ ಡೊಂಬಿವಿಲಿ ಶಿಬಿರ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದ ನಿರೂಪಣೆಯನ್ನು ಲಾಸ್ಯ ಪೂಜಾರಿ ಹಾಗೂ ವಿನಯ್ .ಟಿ.ನಾಯ್ಕ್ ಇವರು ನೆರವೇರಿಸಿಕೊಟ್ಟರು. ಅಂತಿಮವಾಗಿ ರಾಷ್ಟ್ರಗೀತೆ  ನಂತರ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Powered by Blogger.