".

Header Ads

ಗಂಡನಿಂದಲೇ ಹೆಂಡತಿ ಮಗು ಕೊಲೆ !


ಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದ ಆರೋಪಿ  ತನ್ನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗುವಿಗೆ ಹಾರೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಭೀಕರ ಘಟನೆ ಮುಂಜಾನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಮುಂಜಾನೆ ಪತ್ನಿ ಕಾವ್ಯ(25) ಪುತ್ರ ಜೀವನ್ ಮೇಲೆರಗಿದ ಆರೋಪಿ ಮೋಹನ್ ಅಲಿಯಾಸ್ ಸ್ವಾಮಿ (33) ಕೈ ಸಿಕ್ಕ ಹಾರೆಯಿಂದ ತನ್ನ ಪತ್ನಿ ಮಗುವಿನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. 

ರಕ್ತಸಿಕ್ತ ವಾಗಿ ಮನೆಯಲ್ಲಿ ಬಿದ್ದಿದ್ದ ಶವ ಕಂಡು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಆರೋಪಿ ಸ್ವಾಮಿ ಪರಾರಿ ಆಗುವ ಮುನ್ನ ಸ್ಥಳೀಯರೇ ಹಿಡಿದು ಕಟ್ಟಿ ಹಾಕಿ ಚೇಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ ,ಎಂದು  ಪತ್ರೀಕಾ ವರದಿ ಮೂಲಕ ತಿಳಿದು ಬಂದಿದೆ.



Powered by Blogger.