ಕಾಂಗ್ರೆಸ್ ಅಧ್ಯಕ್ಷಗಿರಿಗೆ ಕನ್ನಡಿಗ ಖರ್ಗೆ ಚುಕ್ಕಾಣಿ
ಎದುರಾಳಿ ಶಶಿ ತರೂರ್ ಅವರನ್ನು ಸುಮಾರು 6,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ ಕನ್ನಡಿಗ, ರಾಜ್ಯ ಸಭಾ ಸಂಸದ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ್ದಾರೆ.
ಎರಡು ದಶಕದಲ್ಲಿಯೇ ಇದೇ ಮೊದಲ ಬಾರಿಗೆ ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡಿದ್ದಾರೆ.
ಇನ್ನು ಪ್ರಕಟಗೊಂಡ ಚುನಾವಣಾ ಫಲಿತಾಂಶದಲ್ಲಿ ಎದುರಾಳಿ ಶಶಿತರೂರ್ ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದ ಖರ್ಗೆ 24 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ ಮೊದಲಿಗನೆನಿಸಿದ್ದಾರೆ.
ಚಲಾವಣೆಯಾದ ಸುಮಾರು 9000 ಮತಗಳಲ್ಲಿ 7,897 ಮತಗಳನ್ನು ಪಡೆದ ಮಲ್ಲಿಕಾರ್ಜುನ ಖರ್ಗೆ ಅವರು ಎದುರಾಳಿ ಶಶಿ ತರೂರ್ ಅವರನ್ನು 6797 ಮತಗಳ ಅಂತರದಿಂದ ಸೋಲಿಸಿದರು. ತರೂರ್ 1,100 ಮತಗಳನ್ನು ಗಳಿಸಿದ್ದಾರೆ. 416 ಮತಗಳು ತಿರಸ್ಕೃತವಾಗಿವೆ.
ಮಲ್ಲಿಕಾರ್ಜುನ ಖರ್ಗೆ ಅವರು ಎಸ್ ನಿಜಲಿಂಗಪ್ಪ ಅವರ ಬಳಿಕ, ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಕರ್ನಾಟಕದ ಎರಡನೇ ವ್ಯಕ್ತಿ ಎನಿಸಿದ್ದಾರೆ.

Post a Comment